ilayaraja
ನ್ಯೂಸ್ ನಾಟೌಟ್: ವಿಭಿನ್ನ ಪಾತ್ರಗಳನ್ನು ಮಾಡಿರುವ ನಟ ಧನುಷ್ 2024ರ ಮಾರ್ಚ್‌ನಲ್ಲಿ ಸಂಗೀತ ಲೋಕದ ದಿಗ್ಗಜ ಇಳಯರಾಜ ಬಯೋಪಿಕ್ ಸಿನಿಮಾದ ಬಗ್ಗೆ ಅನೌನ್ಸ್ ಮಾಡಿದ್ದರು. ಲೀಡ್ ರೋಲ್ ನಲ್ಲಿ ಧನುಷ್ ಕಾಣಿಸಿಕೊಳ್ಳುವ ಈ ಚಿತ್ರದ ಮೇಲೆ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು.
ಸಿನಿಮಾ ಘೋಷಣೆ ಆದ ಬಳಿಕ ಮೊದಲ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಆದರೆ ಇದಾದ ಬಳಿಕ ಚಿತ್ರದ ಬಗ್ಗೆ ಯಾವ ಅಪ್ಡೇಟ್ ಕೂಡ ಹೊರಬಿದ್ದಿರಲಿಲ್ಲ. ಇದೇ ವಿಚಾರ ಈಗ ಕಾಲಿವುಡ್ ನಲ್ಲಿ ಬೇರೆ ರೀತಿಯಾಗಿ ಹರಿದಾಡಿದೆ.
ʼಇಳಯರಾಜʼ ಚಿತ್ರವನ್ನು ಡ್ರಾಪ್ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಮಾತುಗಳು ಸುಳ್ಳು. ಈ ಪ್ರಾಜೆಕ್ಟ್ ಡ್ರಾಪ್ ಆಗಿಲ್ಲವೆಂದು ʼಹಿಂದೂಸ್ತಾನ್ ಟೈಮ್ಸ್ʼ ವರದಿ ಮಾಡಿದೆ.
ಅರುಣ್ ಮಾಥೇಶ್ವರನ್ ನಿರ್ದೇಶನದ ʼಇಳಯರಾಜʼ ಟ್ರ್ಯಾಕ್ ನಲ್ಲಿದೆ. ಚಿತ್ರದ ಮೂಲ ನಿರ್ಮಾಣ ಸಂಸ್ಥೆಯಾದ ಎಜಿಎಸ್ ಎಂಟರ್ ಟೈನ್ ಮೆಂಟ್ ಈಗ ಮತ್ತೊಂದು ನಿರ್ಮಾಣ ಸಂಸ್ಥೆಯೊಂದಿಗೆ ಸೇರಿಕೊಂಡು ಚಿತ್ರವನ್ನು ನಿರ್ಮಾಣ ಮಾಡಲಿದೆ ಎಂದು ವರದಿ ತಿಳಿಸಿದೆ.
ಬಯೋಪಿಕ್ ನ ಸ್ಕ್ರಿಪ್ಟ್ ಸಿದ್ಧವಾಗಿದೆ ಎಂದು ಹೇಳಲಾಗಿದ್ದು, ಸಂಪೂರ್ಣ ಯೋಜನೆಯು ಸದ್ಯಕ್ಕೆ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ ಎಂದು ವರದಿ ತಿಳಿಸಿದೆ.
ಸದ್ಯ ಧನುಷ್ ತನ್ನ ನಿರ್ದೇಶನದ ʼನಿಲವುಕು ಎನ್ ಮೆಲ್ ಎನ್ನದಿ ಕೋಬಂʼ ಚಿತ್ರದ ಪ್ರಚಾರದಲ್ಲಿದ್ದಾರೆ. ಈ ಸಿನಿಮಾ ಫೆ.21ರಂದು ರಿಲೀಸ್ ಆಗಲಿದೆ. ಇದಾದ ಬಳಿಕ ಅವರು ʼಇಡ್ಲಿ ಕಡಾಯಿʼ. ʼಕುಬೇರʼ ಮತ್ತು ʼತೇರೆ ಇಷ್ಕ್ ಮೇʼ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.