ರಾಜಕೀಯರಾಜ್ಯವೈರಲ್ ನ್ಯೂಸ್

ಮುಡಾ ಕಂಟಕ: ಪತ್ನಿ ಹೆಸರಲ್ಲಿ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ..! ತಾವೇ ಹಣೆಗೆ ತಿಲಕ ಹಚ್ಚಿಕೊಂಡ ಸಿಎಂ

ನ್ಯೂಸ್ ನಾಟೌಟ್: ಸಿಎಂ ಸಿದ್ದರಾಮಯ್ಯ ತಮ್ಮ ರಾಜ್ಯ ರಾಜಕೀಯವನ್ನು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದರು. ಆದರೆ, ಇತ್ತೀಚೆಗೆ ಹಗರಣಗಳ ಆರೋಪ ಕೇಳಿಬಂದಿದ್ದು, ಕಾನೂನು ಸುಳಿಯಲ್ಲಿ ಒದ್ದಾಡುತ್ತಿದ್ದಾರೆ. 14 ಸೈಟ್‌ಗಳನ್ನ ಸಿಎಂ ಪತ್ನಿ ಪಾರ್ವತಿ ಮುಡಾಗೆ ವಾಪಸ್‌ ನೀಡಿದ್ದರು. ಬಳಿಕ ಸಿಎಂ ವಿರುದ್ಧ ಎಫ್​ಐಆರ್​ ದಾಖಲಿದ್ದು, ಕಾನೂನು ಸಮರ ನಡೆಸಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಲ್ಲಿ ರೇಣುಕಾ ಯಲ್ಲಮ್ಮ ದೇವಿಗೆ ಅರ್ಚನೆ ಮಾಡಿಸಿದ್ದಾರೆ.

ಇಂದು(ಅ.13) ಬೆಳಗಾವಿಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ಬರುತ್ತಿದ್ದಂತೆ ವಿಶೇಷ ಅರ್ಚನೆ ಮಾಡಿದ ಅರ್ಚಕರು, ಆರತಿ ಆಗುವವರೆಗೆ ಗರ್ಭಗುಡಿಯಲ್ಲೇ ನಿಂತು ದರ್ಶನ ಪಡೆದುಕೊಂಡರು. ಆರತಿ ತಟ್ಟೆಗೆ 500 ರೂ. ನೋಟು ಹಾಕಿದರು. ಈ ವೇಳೆ ಪತ್ನಿ ಪಾರ್ವತಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲು ತಿಳಿಸಿದ್ದಾರೆ. ಈ ಹಿಂದೆ ಕುಂಕುಮ ಹಚ್ಚಿಸಿಕೊಳ್ಳದ ಮತ್ತು ಕುಂಟುಮ ವರಸಿಕೊಂಡು ಸುದ್ದಿಯಾಗಿದ್ದ ಸಿದ್ದರಾಮಯ್ಯ ಹಣೆಗೆ ತಾವೇ ಕುಂಕುಮ ಹಚ್ಚಿಕೊಂಡಿದ್ದಾರೆ.

ಇನ್ನು ಗರ್ಭಗುಡಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ಸಾಷ್ಟಾಂಗ ನಮಸ್ಕಾರ ಹಾಕಿದರು. ಯಲ್ಲಮ್ಮ ದೇವಿ ಸನ್ನಿಧಾನದಲ್ಲಿ ಶಾಸಕ ವಿಶ್ವಾಸ ವೈದ್ಯರಿಂದ ಸಿಎಂ ಮತ್ತು ಡಿಸಿಎಂಗೆ ಹೂವಿನ ಹಾರ ಹಾಕಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ಸಿಎಂ ಸಿದ್ದರಾಮಯ್ಯ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆಯುವಾಗ ವೇತನ ಹೆಚ್ಚಿಸುವಂತೆ ದೇಗುಲದಲ್ಲೇ ಅರ್ಚಕರು‌ ಮನವಿ ನೀಡಿದರು. ಈ ವೇಳೆ ಸಂಬಂಧಪಟ್ಟವರ ಜೊತೆಗೆ ಮಾತನಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

Click

https://newsnotout.com/2024/10/police-dsp-siraj-kannada-news-telangana-cricketer/
https://newsnotout.com/2024/10/martin-film-review-kannada-reels-star-apologies-druva-sarja/
https://newsnotout.com/2024/10/rathan-tata-benjamin-netanyahu-kannada-news/
https://newsnotout.com/2024/10/9-year-old-girl-nomore-kannada-news-deva-guli/
https://newsnotout.com/2024/10/mangaluru-passport-issue-bangla-man-arrested-link-with-udupi/
https://newsnotout.com/2024/10/durga-pooje-navaratri-kannada-news-ladies-misbehaviour/
https://newsnotout.com/2024/10/bigboss-kannada-news-police-case-on-organiser-kannada-news/

Related posts

ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಮಗನನ್ನು ಕಳೆದುಕೊಂಡ ತಂದೆ ಮಾಡಿದ ತನಿಖೆಗೆ ಪೊಲೀಸರೇ ಶಾಕ್! 8 ವರ್ಷದ ಬಳಿಕ ಕೇಸ್ ರೀಓಪನ್ ಆಗಿದ್ದೇಗೆ? ಇಲ್ಲಿದೆ ಸಿನಿಮೀಯ ಘಟನೆ

2024 ರ ಮೊದಲ ಸೂರ್ಯ ಗ್ರಹಣ ಯಾವಾಗ..? ಈ 5 ರಾಶಿಗಳ ಮೇಲಿದೆ ಪ್ರಭಾವ..!

ಅವಘಡದಲ್ಲಿ ಕಳೆದುಕೊಂಡ ಪುತ್ರನನ್ನು ಸಮಾರಂಭದಲ್ಲಿ ಕಂಡು ಭಾವುಕರಾದ ಹೆತ್ತವರು..! ಸಹೋದರನಿಗಾಗಿ ಸಹೋದರಿ ಮಾಡಿದ ಮನಕಲಕುವ ಘಟನೆ