ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಹೆತ್ತ ತಾಯಿಯನ್ನೇ ಮರಕ್ಕೆ ಕಟ್ಟಿಹಾಕಿ ಜೀವಂತವಾಗಿ ಸುಟ್ಟ ಮಕ್ಕಳು..! ಏನಿದು ಅಮಾನವೀಯ ಘಟನೆ..?

ನ್ಯೂಸ್ ನಾಟೌಟ್: ಹೆತ್ತ ತಾಯಿಯನ್ನೇ ಮರಕ್ಕೆ ಕಟ್ಟಿ ಹಾಕಿದ ಪಾಪಿ ಮಕ್ಕಳು ಬೆಂಕಿ ಹಚ್ಚಿ ಜೀವಂತ ಸುಟ್ಟುಹಾಕಿರುವ ಅಮಾನವೀಯ ಘಟನೆ ತ್ರಿಪುರದಲ್ಲಿ ನಡೆದಿದೆ.

ಪಶ್ಚಿಮ ತ್ರಿಪುರದ ಕಮರ್ ಬಾರಿ ಜಿಲ್ಲೆಯ ಚಂಪಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ(ಸೆ.28) ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 62 ವರ್ಷದ ಮಹಿಳೆ ಒಂದೂವರೆ ವರ್ಷದ ಹಿಂದಷ್ಟೇ ಪತಿಯನ್ನು ಕಳೆದುಕೊಂಡಿದ್ದಳು. ಆಕೆ ಮಗನ ಮನೆಯಲ್ಲಿ ವಾಸವಾಗಿದ್ದಳು. ಮತ್ತೊಬ್ಬ ಮಗ ಬೇರೆ ಕಡೆ ವಾಸವಿದ್ದ.

ಮಕ್ಕಳು ಮತ್ತು ತಾಯಿಯ ನಡುವೆ ಆಸ್ತಿ ಹಂಚಿಕೆ ಸಂಬಂಧ ನಡೆದ ಕೌಟುಂಬಿಕ ಕಲಹದಿಂದ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಇಬ್ಬರು ಮಕ್ಕಳನ್ನೂ ಬಂಧಿಸಿದ್ದಾರೆ.
ತಾಯಿಯನ್ನು ಮರಕ್ಕೆ ಕಟ್ಟಿಹಾಕಿದ ಮಕ್ಕಳು ಬೆಂಕಿ ಹಚ್ಚಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ.

Click

https://newsnotout.com/2024/10/babies-nomore-kananda-news-children-k-viral-issue/
https://newsnotout.com/2024/10/fire-on-self-govinda-actor-of-bollywwod-kannada-news-gun/
https://newsnotout.com/2024/10/super-star-rajanikanth-kannada-news-hospitalized-76-year-old/
https://newsnotout.com/2024/10/uppinangady-fake-call-as-cbi-officer-kannada-news/

Related posts

ನೆಲ್ಯಾಡಿ:ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು:ಓರ್ವ ಸ್ಥಳದಲ್ಲೇ ಮೃತ್ಯು,ಮತ್ತೋರ್ವ ಗಂಭೀರ

ಸಂಸತ್‌ ನಲ್ಲಿ ಇಂದು(ನ.28) ಅಮ್ಮ-ಅಣ್ಣ-ತಂಗಿ ಪ್ರಮಾಣ ವಚನ ಸ್ವೀಕಾರ, ಇಲ್ಲಿದೆ ಸಂಪೂರ್ಣ ಮಾಹಿತಿ

ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಮಗಳು..! ಗ್ರಾಮಸ್ಥರ ವಿರೋಧದ ನಡುವೆಯೂ ಅದ್ಧೂರಿ ಮದುವೆ! ಇಲ್ಲಿದೆ ವಿಚಿತ್ರ ಲವ್ ಸ್ಟೋರಿ