ಕರಾವಳಿಕ್ರೈಂ

ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾದ ತಾಯಿ; ಓರ್ವ ಮಗಳು ಬಚಾವ್‌ !

ನ್ಯೂಸ್‌ನಾಟೌಟ್‌: ಇಬ್ಬರು ಮಕ್ಕಳೊಂದಿಗೆ ತಾಯಿ ನೇಣಿಗೆ ಶರಣಾದ ಘಟನೆ ಮಂಗಳೂರಿನ ಕೊಡಿಯಾಲ್‌ಬೈಲ್‌ ಬಳಿ ಬುಧವಾರ ಸಂಭವಿಸಿದೆ. ಮೃತ ಮಹಿಳೆಯನ್ನು ವಿಜಯಾ (33 ) ಮತ್ತು ಆಕೆಯ ಪುತ್ರಿ ಶೋಭಿತಾ (4) ಎಂದು ಗುರುತಿಸಲಾಗಿದೆ. ಇನ್ನೊಂದು ಮಗು ಯಜ್ಞಾ ಪವಾಡ ಸದೃಶ್ಯವಾಗಿ ಬದುಕುಳಿದಿದೆ.

ವಿಜಯಾ ಅವರ ಮೊದಲ ಪತಿ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಬಳಿಕ ಎರಡನೇ ವಿವಾಹವಾಗಿದ್ದು, 20 ದಿನಗಳ ಹಿಂದೆ ಎರಡನೇ ಪತಿ ಉಮೇಶ್‌ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.

ಇದರಿಂದ ಮಾನಸಿಕವಾಗಿ ನೊಂದಿದ್ದ ಮಹಿಳೆ ಮಕ್ಕಳೊಂದಿಗೆ ಸಾವಿಗೆ ಶರಣಾಗಿದ್ದಾಳೆ. ಆದರೆ ಮತ್ತೊಂದು ಮಗು ಸಾವಿನ ಕುಣಿಕೆಯಿಂದ ಪಾರಾಗಿದ್ದಾಳೆ. ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Related posts

ಸೂರಜ್ ರೇವಣ್ಣನ ಆಪ್ತನಿಂದ ಸಂತ್ರಸ್ತನ ವಿರುದ್ಧವೇ ದೂರು..! ಸೂರಜ್ ರೇವಣ್ಣ ಅರೆಸ್ಟ್ ಆದ ಬಳಿಕ ಶಿವಕುಮಾರ್ ನಾಪತ್ತೆ..!

12ರ ಬಾಲಕಿಯನ್ನು 5 ಲಕ್ಷಕ್ಕೆ ಮಾರಿದ ತಂದೆ..! 72 ರ ಮುದುಕನ ಜೊತೆ ಮದುವೆ..!

ವಾರ್ಷಿಕ ವಹಿವಾಟಿನಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ದಿ ಬೆಸ್ಟ್’ ಸಾಧನೆ, ಇಲ್ಲಿನ ಆಡಳಿತ ಮಂಡಳಿ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ