ಕ್ರೈಂ

ತಾಯಿಯನ್ನು ರಕ್ಷಿಸಲು ಬಂದ ಮಗನಿಗೂ ವಿದ್ಯುತ್ ಸ್ಪರ್ಶ! ಸ್ಥಳದಲ್ಲೇ ಕೊನೆಯುಸಿರೆಳೆದ ಎರಡು ಜೀವಗಳು!

ನ್ಯೂಸ್ ನಾಟೌಟ್: ಆಂದ್ರದ ಅನಂತಪುರ ಜಿಲ್ಲೆಯಲ್ಲಿ ಡಿ.ಹಿರೇಹಾಳ್ ಮಂಡಲದ ಮಲ್ಲಿಕೇತಿ ಗ್ರಾಮದಲ್ಲಿ ಸೋಮವಾರ ರಾತ್ರಿ ತಮ್ಮ ಕೃಷಿ ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ. ಈ ಈ ಘಟನೆ ತಡವಾಗಿ ಬುಧವಾರ ಬೆಳಕಿಗೆ ಬಂದಿದೆ.

ಮೃತರನ್ನು ಬಿ.ಗಂಗಮ್ಮ (70) ಮತ್ತು ಅವರ ಮಗ ಬಿ.ಬಸವ ರಾಜು (40) ಎಂದು ಗುರುತಿಸಲಾಗಿದೆ. ತಾಯಿ ಮತ್ತು ಮಗ ಇಬ್ಬರೂ ಗ್ರಾಮದ ಹೊರವಲಯದಲ್ಲಿರುವ ತಮ್ಮ ಹೊಲದಲ್ಲಿ ವಾಸವಾಗಿದ್ದರು.

ತಾಯಿಗೆ ವಿದ್ಯುತ್ ತಗುಲಿದಾಗ ಮಗ ಆಕೆಯನ್ನು ರಕ್ಷಿಸಲು ಯತ್ನಿಸಿದನಾದರೂ ವಿದ್ಯುತ್ ಸ್ಪರ್ಶದಿಂದ ಇಬ್ಬರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಂತರ ಅಕ್ಕಪಕ್ಕದಲ್ಲಿದ್ದ ರೈತರು ತಾಯಿ ಮತ್ತು ಮಗ ಮೃತಪಟ್ಟಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Related posts

ಮಂಗಳೂರು: ಹಾಡಹಗಲೇ ಬಂದೂಕಿನಿಂದ ಸಿಬ್ಬಂದಿಯನ್ನು ಬೆದರಿಸಿ ಬ್ಯಾಂಕ್ ದರೋಡೆ..! ಹಣ ಮತ್ತು ಚಿನ್ನಾಭರಣಗಳೊಂದಿಗೆ ಕಾರಿನಲ್ಲಿ ಪರಾರಿ..!

ಕಟ್ಟಡದ ಎರಡನೇ ಮಹಡಿಯಲ್ಲಿ ಸಿಲುಕಿದ್ದ ಮಗುವಿನ ರೋಚಕ ರಕ್ಷಣೆ..! ಇಲ್ಲಿದೆ ವೈರಲ್ ವಿಡಿಯೋ

ಕೊಡಗು: ಮಾವನನ್ನೇ ಗುಂಡಿಕ್ಕಿ ಕೊಂದ ಸೊಸೆ! ಕಾರಣ ನಿಗೂಢ..!