Uncategorizedಕರಾವಳಿರಾಜಕೀಯ

ಮೂಡುಬಿದಿರೆ: ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಉಮೇದುವಾರಿಕೆ ಸಲ್ಲಿಕೆ

ನ್ಯೂಸ್‌ ನಾಟೌಟ್‌: ಮೂಡುಬಿದಿರೆಯ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮಂಗಳವಾರ ಇಲ್ಲಿನ ವೆಂಕಟರಮಣ ದೇವಸ್ಥಾನ, ಹನುಮಂತ ದೇವಸ್ಥಾನ ಬಳಿಯಿಂದ ಮೆರವಣಿಗೆ ಮೂಲಕ ಸಾಗಿ ಬಂದು ಆಡಳಿತ ಸೌಧದಲ್ಲಿ ಉಮೇದುವಾರಿಕೆ ಸಲ್ಲಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌, ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮುಖಂಡರಾದ ಈಶ್ವರ ಕಟೀಲ್, ಸುನಿಲ್ ಆಳ್ವ, ಮೇಘನಾಥ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಮೆರವಣಿಗೆಯಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು. ಕ್ಷೇತ್ರದ ವಿವಿಧೆಡೆ ಆಗಮಿಸಿದ ಕಾರ್ಯಕರ್ತರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಗಳವಾರ ಬೆಳಗ್ಗೆಯಿಂದಲೇ ಮೂಡುಬಿದಿರೆ ಪೇಟೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ನಗರಾದ್ಯಂಥ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು.

Related posts

ಪುತ್ತೂರು: ಸರ್ಕಾರಿ ದಾಖಲೆಗಳ ನಕಲಿ ಜಾಲವನ್ನು ಭೇದಿಸಿದ ಪುತ್ತೂರು ತಾಪಂ ಇಓ ನೇತೃತ್ವದ ತಂಡ, ನಕಲಿ ದಾಖಲೆ, ನಕಲಿ ಸೀಲ್ ವಶಕ್ಕೆ

ಜೊತೆಗಿದ್ದವನ ಶವವನ್ನು 2 ವರ್ಷ ಪ್ರಿಡ್ಜ್ ನಲ್ಲಿಟ್ಟ ಭೂಪ!,ಆತನ ಹಣವನ್ನೇ ಸ್ವಂತ ಖರ್ಚಿಗೆ ಬಳಸಿಕೊಂಡ!

ಮಡಿಕೇರಿ: ಕೊಡಗಿನ ಕೆಲವೆಡೆ ಸೂರ್ಯನ ಸುತ್ತ ಗೋಚರವಾದ ಉಂಗುರದ ಮಾದರಿ..!,ಸೂರ್ಯ ದೇವ’ನ ಸುತ್ತ ವಿವಿಧ ವರ್ಣಗಳ ಉಂಗುರ ದರ್ಶನದಿಂದ ಪುಳಕಿತರಾದ ಜನ