ದೇಶ-ಪ್ರಪಂಚ

ಶ್..!ರೈಲ್ವೇ ಕಚೇರಿಯಲ್ಲಿ ಕೆಲಸ ಮಾಡುತ್ತಿದೆ ಕೋತಿ..!ಯಾರೂ ಡಿಸ್ಟರ್ಬ್ ಮಾಡ್ಬೇಡಿ ಪ್ಲೀಸ್..!ವೈರಲ್ ವಿಡಿಯೋ ನೋಡಿದ್ರೆ ನಿಮ್ಗೂ ಶಾಕ್ ಆಗುತ್ತೆ

ನ್ಯೂಸ್ ನಾಟೌಟ್ : ದೇಶದಲ್ಲಿ ಮೊದಲೇ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ.ಎಷ್ಟೇ ಓದಿದ್ರೂ ಯಾವ ಎಕ್ಸಾಮ್ ಪಾಸ್ ಮಾಡಿದ್ರೂ ಸ್ಪರ್ಧೆ ಹೆಚ್ಚಾಗಿದೆ.ಒಳ್ಳೆಯ ಉದ್ಯೋಗ ಸಿಗಬೇಕಂದ್ರೆ ಹರಸಾಹಸವನ್ನೇ ಪಡಬೇಕು. ಆದ್ರೆ ಈ ದೃಶ್ಯ ನೋಡಿದ್ರೆ ನೀವು ಬೆಚ್ಚಿ ಬೀಳೋದಂತು ಗ್ಯಾರಂಟಿ.ರೈಲ್ವೆ ಅಧಿಕಾರಿಯ ಮೇಜಿನ ಮೇಲೆ ಲಂಗೂರ್​ ಜಾತಿಯ ಕೋತಿಯೊಂದು ಕುಳಿತು ಕಚೇರಿಯ ಕೆಲಸದಲ್ಲಿ ಫುಲ್​​ ಬ್ಯುಸಿಯಾಗಿರುವಂತೆ ಕಾಣಿಸುತ್ತಿದೆ. ಈ ದೃಶ್ಯ ನೋಡಿದ್ರೆ ಅಬ್ಬಾ..!ಕೋತಿಗಳು ಈ ಕೆಲಸ ಮಾಡಲು ಹೊರಟ್ರೆ ಮನುಷ್ಯರ ಪರಿಸ್ಥಿತಿ ಹೇಗೆ ? ಎನ್ನುವ ಪ್ರಶ್ನೆ ಮೂಡದಿರಲಿಕ್ಕಿಲ್ಲ..!

ಹೌದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.ನೋಡೋದಕ್ಕೆ ಇದು ಗಂಭೀರ ಎಂದು ಅನಿಸಿದರೂ ಇದು ಕೇವಲ ಕಪಿ ಚೇಷ್ಟೆ ಅಷ್ಟೇ.ರೈಲ್ವೆ ಅಧಿಕಾರಿಯ ಮೇಜಿನ ಮೇಲೆ ಲಂಗೂರ್​ ಜಾತಿಯ ಕೋತಿಯೊಂದು ಕುಳಿತಿರುವಂತಹ ದೃಶ್ಯವಿದು. ಕಚೇರಿಯ ಕುರ್ಚಿಯ ಮೇಲೆ ಆರಾಮವಾಗಿ ಕುಳಿತಿರುವ ಕೋತಿ ಸುಮ್ಮನೆ ಕುಳಿತಿಲ್ಲ ಬದಲಾಗಿ ಎಲ್ಲಾ ಫೈಲ್​​ಗಳನ್ನ ಚೆಕ್​​​ ಮಾಡುತ್ತಿದೆ.ಈ ಮೂಲಕ ಕೋತಿಯು ಕಚೇರಿಯಲ್ಲಿ ಕೆಲಸದಲ್ಲಿ ಫುಲ್ ಬ್ಯುಸಿ ಎಂಬಂತೆ ತೋರಿಸುವ ವಿಡಿಯೋ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

ಈ ದೃಶ್ಯ ಪಶ್ಚಿಮ ಬಂಗಾಳದ ರೇಲ್ವೇ ಸ್ಟೇಶನ್​​​ ಒಂದರಲ್ಲಿ ಕಂಡು ಬಂದಿದ್ದು ಎನ್ನಲಾಗಿದೆ. ಕೋತಿಯು ಮನುಷ್ಯ ಆಫೀಸಲ್ಲಿ ಕೆಲಸ ಮಾಡುವ ರೀತಿಯಲ್ಲೇ ಅಲ್ಲಿದ್ದ ಫೈಲ್​​​ಗಳನ್ನ ಹುಡುಕಾಡುತ್ತಿದೆ. ಅದೇ ರೀತಿ ಎಲ್ಲಾ ಫೈಲ್​ಗಳನ್ನ ಪರಿಶೀಲಿಸುತ್ತಿದೆ. ಇನ್ನು ಈ ಕೋತಿಯನ್ನ ನೋಡಲು ಜನಸಮೂಹವೇ ಕಚೇರಿಯ ಮುಂದೆ ಜಮಾಯಿಸಿದೆ ಎಂದು ತಿಳಿದು ಬಂದಿದೆ.

ಕಚೇರಿಯಲ್ಲಿ ಕುಳಿತಿರುವ ಕೋತಿಯ ಈ ದೃಶ್ಯ ನೋಡಿ ನೆಟ್ಟಿಗರ ಕುತೂಹಲಕ್ಕೂ ಕಾರಣವಾಗಿದೆ. ಮಾತ್ರವಲ್ಲ ಕೋತಿಯ ತುಂಟಾಟ ನೋಡಿ ಭಲೇ ಕೋತಿ.. ನಿನ್ನ ಸಮಯ ಪ್ರಜ್ಞೆ ನೋಡಿ ನಾವು ಕಲಿಬೇಕಿದೆ ಎನ್ನುತ್ತಿದ್ದಾರೆ.ನಿನ್ನ ಕರ್ತವ್ಯನಿಷ್ಠೆಯನ್ನು ಮೆಚ್ಚಲೇ ಬೇಕೆಂದು ಕಾಮೆಂಟ್ ಮಾಡುತ್ತಿದ್ದಾರೆ.

ಓರ್ವ ವ್ಯಕ್ತಿ ಕಾಮೆಂಟ್ ಮಾಡುತ್ತಾ ಹೇಳಿದ್ದು, ಈ ಕೋತಿ ಸರ್ಕಾರಿ ನೌಕರಿ ಮಾಡುತ್ತಲಿದ್ದು, ನಮಗಿಂತಲೂ ಬೇಗನೆ ಕೋತಿಯ ಮದುವೆಯಾಗುತ್ತೆ ಎಂದು ಕಾಮೆಂಟ್​​ ಮಾಡಿದ್ದಾರೆ. ಮತ್ತೋರ್ವ ವ್ಯಕ್ತಿ, ಕೋತಿ ಕೆಲಸದಲ್ಲಿ ಮಗ್ನವಾಗಿದೆ ಅದನ್ನ ಡಿಸ್​​​ಟರ್ಬ್​​​ ಮಾಡ್ಬೇಡಿ ಅಂತಾ ಟ್ವೀಟ್​​ ಮಾಡಿದ್ದಾರೆ.

Related posts

ಚೀನಾದಲ್ಲಿ ಕೋವಿಡ್ ಉಲ್ಬಣ : ಗನ್ಸು ಪ್ರಾಂತ್ಯದ ಎಲ್ಲ ಪ್ರವಾಸಿ ತಾಣಗಳು ಬಂದ್

ಪಾತಾಳಕ್ಕೆ ಉರುಳಿದ ಬಸ್..! 28 ಮಂದಿಯ ದುರಂತ ಅಂತ್ಯ..!

ಸತ್ಯವನ್ನೇ ಬಯಲಿಗೆಳೆಯಿತು ‘ಬಿಗ್‌ ಬಾಸ್‌ ಶೋ’..! 7 ವರ್ಷದ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿ ಮಂಗಳಮುಖಿಯಾಗಿ ಪತ್ತೆ..!ಎರಡು ಮಕ್ಕಳ ತಂದೆಯೂ ಆದ ಈತ ಪೊಲೀಸರ ಮುಂದೆ ಹೇಳಿದ್ದೇನು?