ದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಬಿಸಿಲ ತಾಪಕ್ಕೆ ಸ್ಮಿಮ್ಮಿಂಗ್‌ ಪೂಲ್‌ ನಲ್ಲಿ ಜಲಕ್ರೀಡೆಯಾಡಿದ ಮಂಗಗಳು..! ಇಲ್ಲಿದೆ ವೈರಲ್ ವಿಡಿಯೋಗಳು

ನ್ಯೂಸ್ ನಾಟೌಟ್: ದೇಶದೆಲ್ಲೆಡೆ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಈ ವೇಳೆ ಕೊಳ, ನದಿ ಕಂಡರೆ ಸಾಕು ಹೋಗಿ ಈಜಾಡೋಣ ಎನಿಸುತ್ತದೆ. ಈ ಪರಿಯ ಬಿಸಿಲಿನ ಬೇಗೆಗೆ ಮನುಷ್ಯರು ಮಾತ್ರವಲ್ಲ ಪ್ರಾಣಿಗಳೂ ಕಂಗಾಲಾಗಿವೆ. ಈ ಮಧ್ಯೆ ಮನುಷ್ಯರು ಮಾತ್ರ ಯಾಕೆ ನಾವೂ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈಜಾಡಿ ತಂಪು ಮಾಡಿಕೊಳ್ಳುತ್ತೇವೆ ಎಂಬಂತಿದೆ ಈ ಮಂಗಗಳ ವರ್ತನೆ.

ಮುಂಬೈಯ ವಸತಿ ಸಂಕೀರ್ಣದ ಈಜುಕೊಳಕ್ಕೆ ಬಂದಿದ್ದ ಮಂಗಗಳ ಹಿಂಡು ಜಲಕ್ರೀಡೆಯಾಡಿ ಮೈ ಮನಸ್ಸು ಹಗುರ ಮಾಡಿಕೊಂಡಿವೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮುಂಬೈಯ ಬೋರಿವಾಲಿ ಪ್ರದೇಶದಲ್ಲಿರುವ ವಸತಿ ಸಂಕೀರ್ಣದೊಳಗೆ ಕಂಡುಬಂದ ಈ ದೃಶ್ಯವನ್ನು ಸೆರೆ ಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲಾಗಿದೆ. ʼಮಂಗಗಳು ಈಜು ಕೊಳಕ್ಕೆ ಮರಳಿವೆ. ಈ ಬೇಸಿಗೆಯ ದಿನವನ್ನು ಸಿಮ್ಮಿಂಗ್‌ ಪೂಲ್‌ನಲ್ಲಿ ಕಳೆಯುತ್ತಿವೆʼ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

Related posts

ಕೋಟಿಗಟ್ಟಲೆ ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಬೆಂಬಲಕ್ಕೆ ನಿಂತರಾ ಕೇಂದ್ರ ಸಚಿವೆ? ಶೋಭಾ ಕರಂದ್ಲಾಜೆ ಹೇಳಿದ್ದೇನು?

ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ..! ಮೃತಪಟ್ಟ 91 ಮಂದಿಯಲ್ಲಿ 14 ಮಂದಿ ಪೊಲೀಸರು..!

ರೇಣುಕಾಸ್ವಾಮಿ ಕೊಲೆ ಕೇಸ್‌ ತನಿಖೆ ಮುಕ್ತಾಯ..! ಇಂದೇ(ಸೆ.4) ಕೋರ್ಟ್ ಗೆ ಚಾರ್ಜ್‌ಶೀಟ್‌ ಸಲ್ಲಿಕೆ..!