ಕ್ರೈಂವೈರಲ್ ನ್ಯೂಸ್

7 ಮಂಗಗಳನ್ನು ಕೊಂದು ಮೂಟೆ ಕಟ್ಟಿ ಎಸೆದದ್ಯಾರು..? ರಸ್ತೆ ಬದಿ ಬಿದ್ದಿದ್ದ ಚೀಲಗಳನ್ನು ನೋಡಿ ಸ್ಥಳೀಯರು ಮಾಡಿದ್ದೇನು? ಮುಂದೇನಾಯ್ತು..?

ನ್ಯೂಸ್ ನಾಟೌಟ್: ಏಳು ಮಂಗಗಳನ್ನು ಕೊಂದು ಚೀಲದಲ್ಲಿ ಕಟ್ಟಿ, ರಸ್ತೆ ಬದಿ ಎಸೆದು ಹೋಗಿರುವ ಅಮಾನವೀಯ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಯಲಚವಾಡಿ ಬಳಿ ಭಾನುವಾರ ನಡೆದಿದೆ.

ರಸ್ತೆ ಬದಿ ಬಿದ್ದಿದ್ದ ಚೀಲವನ್ನು ನೋಡಿದ ಸ್ಥಳೀಯರು ಅನುಮಾನಗೊಂಡು, ಅದನ್ನು ಬಿಚ್ಚಿ ನೋಡಿದಾಗ ಕೋತಿಗಳ ಕಳೇಬರ ಪತ್ತೆಯಾಗಿದೆ.

ಮೃತ ಮಂಗಗಳ ಪೈಕಿ ಒಂದು ಮರಿಯೂ ಸೇರಿದಂತೆ, ಎಲ್ಲವೂ ಕುತ್ತಿಗೆ ಭಾಗದಲ್ಲಿ ರಕ್ತದ ಕಲೆ ಇರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಆದರೂ, ಯಾರೂ ಸ್ಥಳಕ್ಕೆ ಬಾರದ ಕಾರಣ ಅಸಮಾಧನಗೊಂಡ ಸ್ಥಳೀಯರು, ಕಡೆಗೆ ಮೃತ ಮಂಗಗಳ ಕಳೇಬರಕ್ಕೆ ಪೂಜೆ ಸಲ್ಲಿಸಿ ರಸ್ತೆ ಪಕ್ಕದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಕೋತಿಗಳು ಸಾಮಾನ್ಯವಾಗಿ ತೆಂಗಿನ ಮರದಲ್ಲಿ ಎಳನೀರು, ಸೀಬೆಕಾಯಿ, ಕಡಲೆಕಾಯಿ ಸೇರಿದಂತೆ ಇತರ ಬೆಳೆಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತವೆ. ಅವುಗಳ ಉಪಟಳ ತಡೆಯಲಾಗದೆ ಕಿಡಿಗೇಡಿಗಳು ಅವುಗಳನ್ನು ಕೊಂದು ಹಾಕಿರುವ ಅನುಮಾನವನ್ನು ವ್ಯಕ್ತವಾಗಿದೆ.

ಮಂಗಗಳು ವನ್ಯಜೀವಿ ರಕ್ಷಣೆ ಕಾಯ್ದೆ– 1972ರ ಸಂರಕ್ಷಿತ ಕಾಯ್ದೆ ಅಡಿಯಲ್ಲಿದ್ದರೂ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ವನ್ಯಜೀವಿ ವಲಯ ಅರಣ್ಯ ಅಧಿಕಾರಿಗಳು ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಜವಾಬ್ದಾರಿ ಹಾಕಿದ್ದಾರೆ ಎಂದು ವರದಿ ತಿಳಿಸಿದೆ.

Related posts

ದರ್ಶನ್ ಮನೆ ನಾಯಿ ವೈದ್ಯರಿಗೆ ಕಚ್ಚಿದ್ದು ಹೇಗೆ..? ನಟ‌ ದರ್ಶನ್ ವಿರುದ್ಧ ಎಫ್ ಐಆರ್ ದಾಖಲಿಸಿದ್ಯಾರು? ಏನಿದು ಪ್ರಕರಣ?

ಸುಳ್ಯದ ಗಾಂಧಿನಗರದ ಬಳಿ ರಾತ್ರಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು..! ಪೊಲೀಸ್ ದೂರು ದಾಖಲು

ಭಾರತದ ನ್ಯೂಕ್ಲಿಯರ್ ವಿಜ್ಞಾನಿ ಡಾ.ಆರ್ ಚಿದಂಬರಂ ನಿಧನ..! ಭಾರತ ಸರ್ಕಾರಕ್ಕೆ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿದ್ದ ಪದ್ಮ ವಿಭೂಷಣ ಪುರಸ್ಕೃತ ವಿಜ್ಞಾನಿ