ಕ್ರೈಂವೈರಲ್ ನ್ಯೂಸ್

ಕೋತಿಗಳ ದಾಳಿಗೆ ಕಟ್ಟಡದ ಮೇಲ್ಛಾವಣಿಯಿಂದ ಬಿದ್ದ ಬಾಲಕಿ..! 10ನೇ ತರಗತಿ ವಿದ್ಯಾರ್ಥಿನಿಯ ದುರಂತ ಸಾವು..!

ನ್ಯೂಸ್ ನಾಟೌಟ್: ಕೋತಿಗಳ ಗುಂಪೊಂದು ಛಾವಣಿಯಿಂದ ಅಚಾನಕ್ಕಾಗಿ ಬಾಲಕಿಯನ್ನು ತಳ್ಳಿದ ಪರಿಣಾಮ ಬಿಹಾರದ ಸಿವಾನ್‌ ನಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಇಂದು(ಜ.26) ನಡೆದಿದೆ.

ಪ್ರಿಯಾ ಕುಮಾರಿ ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಈಕೆ ಛಾವಣಿ ಮೇಲೆ ಕುಳಿತು ಓದುತ್ತಿದ್ದಳು. ಈ ವೇಳೆ ಕೋತಿಗಳು ಆಕೆ ಮೇಲೆ ದಾಳಿ ಮಾಡಿವೆ. ಭಯಭೀತಳಾಗಿ ಕೋತಿಗಳಿಂದ ತಪ್ಪಿಸಿಕೊಳ್ಳಲು ಬಾಲಕಿ ಮುಂದಾಗಿದ್ದಾಳೆ.

ತಪ್ಪಿಸಿಕೊಳ್ಳುವ ಭರದಲ್ಲಿ ಛಾವಣಿಯಿಂದ ಬಾಲಕಿ ಬಿದ್ದಿದ್ದಾಳೆ ಎನ್ನಲಾಗಿದೆ. ಬಾಲಕಿ ಗಂಭೀರ ಗಾಯಗೊಂಡಿದ್ದಳು. ಆಕೆಯ ತಲೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರವಾದ ಗಾಯಗಳಾಗಿವೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ಸಿವಾನ್ ಸದರ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Click

https://newsnotout.com/2025/01/giser-kannada-news-video-women-threat-kannada-news-viral/
https://newsnotout.com/2025/01/thnailand-kananda-news-7-people-under-police-custody/
https://newsnotout.com/2025/01/ikbal-mla-land-scam-kannada-nrews-villagers/
https://newsnotout.com/2025/01/independence-day-padma-2025-award-issue-anathnag/
https://newsnotout.com/2025/01/belthangady-robbery-charmadi-case-viral-news-d/
https://newsnotout.com/2025/01/thnailand-kananda-news-7-people-under-police-custody/

Related posts

ಸ್ಟೇರಿಂಗ್ ಮುರಿದು ಮುಳುಗಿದ ಹಡಗು! ಇನ್ನೂ ನಿಗೂಢವಾಗಿ ಉಳಿದ ಹಡಗು ದುರಂತ!

ಎಟಿಎಂಗೆ ತುಂಬಿಸಲು ಬಂದವ ತನ್ನ ಬ್ಯಾಗ್‌ ನಲ್ಲೇ ಹಣ ತುಂಬಿಕೊಂಡು ಪರಾರಿ..! ಎಟಿಎಂಗೆ ಹಣ ತುಂಬುವ ಏಜೆನ್ಸಿಯಾಗಿ ದುಡಿಯುತ್ತಿದ್ದ ಆತನಿಗೆ ಆಕೆಯ ಕುಮ್ಮಕ್ಕು..!

ದರ್ಶನ್ ಮತ್ತು ಪವಿತ್ರಾಗೌಡ ಪರ ವಕೀಲರು ಧರ್ಮಸ್ಥಳಕ್ಕೆ ಭೇಟಿ..! ಕುತೂಹಲ ಕೆರಳಿಸಿದ ವಕೀಲರ ನಡೆ..!