ಕ್ರೈಂಬೆಂಗಳೂರುವೈರಲ್ ನ್ಯೂಸ್

ಮೊಬೈಲ್ ಚಾರ್ಜಿಂಗ್ ವೈರ್‌ ನಿಂದ ಕುತ್ತಿಗೆಗೆ ಬಿಗಿದು ತಾಯಿಯನ್ನು ಹತ್ಯೆ ಮಾಡಿದ ಮಗ..! ಕೊಲೆಯ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಗ..!

ನ್ಯೂಸ್ ನಾಟೌಟ್ : ತಾಯಿಯನ್ನು ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಸೂರ್ಯಸಿಟಿ ಸಮೀಪದ ಹಳೆ ಚಂದಾಪುರದಲ್ಲಿ ನಡೆದಿದೆ.

ಮಹಾಲಕ್ಷ್ಮಿ (41) ಕೊಲೆಯಾದ ಮಹಿಳೆ.ಮತ್ತು ರಮೇಶ್ (21) ತಾಯಿಯನ್ನ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಮಗ ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಮೂಲದ ಚಳ್ಳಕೆರೆಯ ಚಿಕ್ಕಹಳ್ಳಿ ಕುಟುಂಬ, ಕಳೆದ ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬಂದಿದ್ದರು.

ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಗ ಕುಡಿದು ಬಂದು ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ನಿನ್ನೆ ರಾತ್ರಿಯೂ ಕುಡಿದು ಬಂದು ತಾಯಿ ಮಹಾಲಕ್ಷ್ಮಿ ಜೊತೆ ಗಲಾಟೆ ಮಾಡಿದ್ದ. ಗಲಾಟೆ ವಿಕೋಪಕ್ಕೆ ತಿರುಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೊಬೈಲ್ ಚಾರ್ಜಿಂಗ್ ವೈರ್‌ ನಿಂದ ಕುತ್ತಿಗೆಗೆ ಬಿಗಿದು ತಾಯಿ ಹತ್ಯೆ ಮಾಡಿದ್ದಾನೆ.

ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರ ಮತ್ತು ಬೆಂಗಳೂರು ಗ್ರಾಮಾಂತರ ಎಎಸ್‌ ಪಿ ನಾಗೇಶ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Click

https://newsnotout.com/2025/01/15-year-old-girl-nomore-by-cenring-wood-issue-bengaluru/
https://newsnotout.com/2025/01/kannada-news-video-and-issue-husband-and-wife-kannada-news-s/
https://newsnotout.com/2025/01/40-lakh-rupees-goss-profit-for-pani-puri-man-k/
https://newsnotout.com/2025/01/lion-bone-kannada-news-lover-boy-misbehgaviour-s/
https://newsnotout.com/2025/01/marriage-and-love-conflict-with-family-kannada-news-d/

Related posts

ಡೆಂಗ್ಯೂಗೆ 8 ವರ್ಷದ ಬಾಲಕಿ ಸಾವು..! ಒಂದೇ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ 4 ಮಂದಿ ಬಲಿ..!

ಮೈಸೂರಿನ ಫೋಟೋಗ್ರಾಫರ್ ಈಶ್ವರ ಮಂಗಲದಿಂದ ನಿಗೂಢ ಕಣ್ಮರೆ, ಹಲವು ಅನುಮಾನ

ಅಡ್ಕಾರು: ಕೂಲಿ ಕಾರ್ಮಿಕರ ಮೇಲೆ ಎರಗಿದ ಕಾರು ಪ್ರಕರಣ, ಕಣ್ಣೆದುರೇ ಸಂಭವಿಸಿದ ಭೀಕರ ಅಪಘಾತ ಹೇಗಿತ್ತು..? ಸಾವನ್ನೇ ಗೆದ್ದ ವ್ಯಕ್ತಿ ಹೇಳಿದ್ದೇನು..?