ಕ್ರೈಂ

ಮೈಸೂರಿನ ಫೋಟೋಗ್ರಾಫರ್ ಈಶ್ವರ ಮಂಗಲದಿಂದ ನಿಗೂಢ ಕಣ್ಮರೆ, ಹಲವು ಅನುಮಾನ

490
Spread the love

ಈಶ್ವರಮಂಗಲ: ಮೈಸೂರು ಮೂಲದ ಫೋಟೋಗ್ರಾಫರ್ ವೊಬ್ಬರು ಪುತ್ತೂರು ತಾಲೂಕಿನ ಈಶ್ವರ ಮಂಗಲದಿಂದ ನಿಗೂಢವಾಗಿ ಕಣ್ಮರೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ವಾರಗಳ ಹಿಂದೆ ಫೋಟೋಗ್ರಾಫರ್ ಜಗನ್ನಾಥ್ ಶೆಟ್ಟಿ (58) ಎಂಬುವವರು ಮೈಸೂರಿನಿಂದ ಈಶ್ವರಮಂಗಲಕ್ಕೆ ಬಂದಿದ್ದರು. ಈ ವೇಳೆ ಪುಳಿತ್ತಡಿಯಿಂದ ಹಠಾತ್‌ ನಾಪತ್ತೆಯಾಗಿದ್ದಾರೆ. ಈವರೆಗೆ ಸುಳಿವು ಸಿಕ್ಕಿಲ್ಲ. ಸಂಪ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಎರಡು ತಂಡಗಳಾಗಿ ತನಿಖೆ ನಡೆಸುತ್ತಿದ್ದಾರೆ. ಒಂದು ತಂಡ ಈಶ್ವರ ಮಂಗಲದಲ್ಲಿ ತನಿಖೆ ನಡೆಸುತ್ತಿದೆ. ಮತ್ತೊಂದು ತಂಡ ಮೈಸೂರಿನಲ್ಲಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಜಗನ್ನಾಥ್‌ ಶೆಟ್ಟಿಗಾಗಿ ಹುಡುಕಾಟ ನಡೆಸುತ್ತಿದೆ.

ಸುಳಿವು ಸಿಕ್ಕಿತೇ?

ಜಗನ್ನಾಥ ಶೆಟ್ಟಿ ನಾಪತ್ತೆ ಪ್ರಕರಣದ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಈಶ್ವರ ಮಂಗಲದ ಮೂನಡ್ಕ ಎಂಬಲ್ಲಿ ಜಾಗವೊಂದನ್ನು ಖರೀದಿಸಿರುವ ಜಗನ್ನಾಥ ಶೆಟ್ಟಿ ಹಣಕಾಸಿನ ವಿವಾದಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಪಹರಿಸಿರಬಹುದೇ? ಅನ್ನುವ ಬಗ್ಗೆ ಪೊಲೀಸರಿಗೆ ಅನುಮಾನ ಹುಟ್ಟಿದೆ. ಭಾನುವಾರ ಈಶ್ವರ ಮಂಗಲದ ಸುತ್ತಮುತ್ತ ಹಲವು ವ್ಯಕ್ತಿಗಳನ್ನು ಡಿಸಿಪಿ ಘಾನ ನೇತೃತ್ವದ ತಂಡ ತನಿಖೆ ನಡೆಸಿದೆ. ಸಂಪ್ಯ ಠಾಣಾ ಇನ್ಸ್ ಪೆಕ್ಟರ್ ಉದಯ್ ತನಿಖೆ ನೇತೃತ್ವವಹಿಸಿಕೊಂಡಿದ್ದಾರೆ.

ಮೊಬೈಲ್‌ ಸಿಗ್ನಲ್ ಪತ್ತೆ

ಜಗನ್ನಾಥ ಶೆಟ್ಟಿಗೆ ಸೇರಿದ ಮೊಬೈಲ್ ಲೊಕೇಶನ್ ಮೈಸೂರಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಸಿಗ್ನಲ್ ಸಿಕ್ಕಿರುವ ಫೋನ್‌ ಈಗ ಸ್ವಿಚ್ ಆಫ್ ಆಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಲಾಗಿದೆ.

See also  ಇನ್ನು ಮುಂದೆ ವಾಟ್ಸ್ ಆ್ಯಪ್ ಮೂಲಕವೂ ಪೊಲೀಸರಿಗೆ ದೂರು ನೀಡಬಹುದು..! ದಾಖಲಾಯ್ತು ಮೊದಲ ಡಿಜಿಟಲ್ ಎಫ್‌.ಐ.ಆರ್..!
  Ad Widget   Ad Widget   Ad Widget   Ad Widget   Ad Widget   Ad Widget