ಕರಾವಳಿ

13 ದಿನಗಳಿಂದ ನಾಪತ್ತೆಯಾಗಿದ್ದ ಯುವತಿ ಪತ್ತೆ,ಮದುವೆಯಾಗಿ ಠಾಣೆಗೆ ಹಾಜರಾದ ಶಿವಾನಿ

ನ್ಯೂಸ್ ನಾಟೌಟ್ :ಕಳೆದ 13 ದಿನಗಳಿಂದ ನಾಪತ್ತೆಯಾಗಿದ್ದ ಯುವತಿಯೋರ್ವಳು ಪತ್ತೆಯಾಗಿದ್ದಾಳೆ. ಈ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.ಕಳೆದ ಜನವರಿ 16ರಂದು ಮಣಪ್ಪುರಂ ಫೈನಾನ್ಸ್ ಕೆಲಸಕ್ಕೆ ತೆರಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ಶಿವಾನಿ(20) ಪ್ರೀತಿಸುತ್ತಿದ್ದ ಯುವಕನ ಜತೆಗೆ ಮದುವೆಯಾಗಿ ಠಾಣೆಗೆ ಹಾಜರಾದ ಘಟನೆ ನಡೆದಿದೆ.

ಏನಿದು ಘಟನೆ?


ಶಿವಾನಿ ಫೈನಾನ್ಸ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಡಿಜೆ ಆಪರೇಟರ್ ಧನುಷ್ ಎಂಬಾತನೊಂದಿಗೆ ಪರಿಚಯವಾಗಿ ಇವರಿಬ್ಬರು ಪ್ರೀತಿಸುತ್ತಿ
ದ್ದು,ಆತನೊಂದಿಗೆ ಮನೆ ಬಿಟ್ಟು ತೆರಳಿದ್ದಳು ಎಂಬ ಮಾಹಿತಿ ಕೂಡ ಸಿಕ್ಕಿದೆ. ಹಣವಿಲ್ಲದೆ ಜೋಡಿ ರೈಲಿನ ಮೂಲಕ ಮಡಗಾಂವ್ ಗೆ ಹೋಗಿ ಅಲ್ಲಿ ಮೊಬೈಲ್ ಒಂದನ್ನು ಮಾರಿದ್ದು ಅದರಲ್ಲಿ ಬಂದ ಹಣದಲ್ಲಿ ಖರ್ಚು ಮಾಡಿದ್ದರು.ನಂತರ ದೆಹಲಿಗೆ ತೆರಳಿದ್ದು,ಅಲ್ಲಿ ಕೈಯ್ಯಲ್ಲಿದ್ದ ಇನ್ನೊಂದು ಮೊಬೈಲ್ ಮಾರಿದ್ದಾರೆ.ನಂತರ ಮರಳಿ ಮಡಗಾಂವ್ ಗೆ ಬಂದಿತ್ತು ಈ ಜೋಡಿ. ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸುರತ್ಕಲ್ ಪೊಲೀಸರು ನಂಬರ್ ಟ್ರೇಸ್ ಮಾಡಿ ಜೋಡಿಯ ಬೆನ್ನು ಬಿದ್ದು ಕೊನೆಗೂ ಪತ್ತೆ ಹಚ್ಚಿದ್ದಾರೆ.ಯುವತಿ ಪೊಲೀಸ್ ಠಾಣೆಗೆ ಬಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾಗಿ ಹೇಳಿಕೆ ನೀಡಿದ್ದಾಳೆ.

ಮೊಬೈಲ್ ಸ್ವಿಚ್ ಆಫ್ :

ಕಮಲಾಕ್ಷ ಎಂಬವರ ಪುತ್ರಿ ಶಿವಾನಿ (20) ಮಣಪ್ಪುರಂ ಫೈನಾನ್ಸ್‌ನ ಉದ್ಯೋಗಿಯಾಗಿದ್ದು ಜ.16ರಂದು ಕೆಲಸಕ್ಕೆಂದು ತೆರಳಿದ್ದಳು. ಸಂಜೆ 6 ಗಂಟೆಯಾದರೂ ಮರಳಿ ಬಂದಿಲ್ಲ ಎಂದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇತ್ತ ಪಬ್‌ನಲ್ಲಿ ಡಿಜೆ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಧನುಷ್ ಕೆ. ಜ.15ರಂದು ರಾತ್ರಿ ಕೆಲಸ ಮುಗಿಸಿಕೊಂಡು ನಗರದ ಮೇರಿಹಿಲ್‌ನಲ್ಲಿರುವ ಮಾವನ ಮನೆಯಲ್ಲಿ ಉಳಿದುಕೊಂಡಿದ್ದರು.ಮರುದಿನ ಬೆಳಗ್ಗೆ 7.45ಕ್ಕೆ ಮನೆಯಿಂದ ಹೊರಟು ತಂದೆಯ ಮನೆಗೆ ಹೋಗುವುದಾಗಿ ಮಾವನಲ್ಲಿ ಹೇಳಿ ಹೋಗಿದ್ದರು.ಆದರೆ ಅನಂತರ ಧನುಷ್‌ಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಕಂಕನಾಡಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Related posts

Soujanya Case: ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೇಳಿಕೆ, ಬಂಗೇರ ಹೇಳಿಕೆಯನ್ನು ತಿರುಚಿದವೇ ಮಾಧ್ಯಮಗಳು..? ಅಂದು ನಿಜವಾಗಿಯೂ ಬಂಗೇರ ಹೇಳಿದ್ದಾದರೂ ಏನು? ಇಲ್ಲಿದೆ ವಿಡಿಯೋ

ಟೀಂ ಸುಳ್ಯ ಇನ್ ಬೆಂಗಳೂರು..! ಏನಿದು ಸುಳ್ಯದ ಯುವಕರ ವಾಟ್ಸಾಪ್ ಗ್ರೂಪ್, ಮೀಟ್ ದಿ ಟೀಂ..?

ಸುಳ್ಯ:ಗಾಬರಿಯಿಂದ ಓಡುತ್ತಿದ್ದ ಅಜ್ಜಿಗೆ ನೆರವಾದ ಗ್ರಾ.ಪಂ.ಅಧ್ಯಕ್ಷೆ,ವಾರೀಸುದಾರರಿದ್ದಲ್ಲಿ ಕರೆದು ಕೊಂಡು ಹೋಗುವಂತೆ ಮನವಿ