ಕ್ರೈಂದೇಶ-ಪ್ರಪಂಚ

ಸ್ನೇಹಿತೆಯ ತಂದೆಯಿಂದ ಆಶ್ಲೀಲ ಕಿರುಕುಳ..! ಅಪ್ರಾಪ್ತ ಬಾಲಕಿ ಆತ್ಮಹತ್ಯೆ !

ನ್ಯೂಸ್ ನಾಟೌಟ್:  ಆಗ್ರಾದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಸ್ನೇಹಿತೆಯ ತಂದೆ ಫೋನ್ ಮೂಲಕ ಕಿರುಕುಳ ನೀಡಿದ್ದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾರ್ಚ್ 13 ರಂದು ಎತ್ಮಾದ್‌ಪುರ ಪಟ್ಟಣದಿಂದ ಈ ಘಟನೆ ವರದಿಯಾಗಿದೆ.

ಆರೋಪಿ ರಾಘವೇಂದ್ರ ಸಿಂಗ್ ಚೌಹಾಣ್ ಎಂಬ ವ್ಯಕ್ತಿ ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದರು, ಈಕೆಯ ಜೊತೆ ಫೋನ್‌ನಲ್ಲಿ ಅಶ್ಲೀಲವಾಗಿ ಮಾತನಾಡುತ್ತಿದ್ದರು, ಆಕೆಯ ಮನೆಯವರಿಗೆ ಹಲವು ಬಾರಿ ದೂರು ನೀಡಿದ್ದರೂ ಅದು ಪ್ರಯೋಜನವಾಗಿರಲಿಲ್ಲ ಎಂದು ಮೃತಳ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಠಾಣಾ ಎಸ್‌ಎಚ್‌ಒ ಎನ್‌ಕೆ ಮಿಶ್ರಾ, ಆರೋಪಿಯನ್ನು ಯಮುನಾ ಎಕ್ಸ್‌ಪ್ರೆಸ್‌ ವೇ ಬಳಿ ಬಂಧಿಸಲಾಗಿದೆ ಮತ್ತು ಅವನ ಬಳಿ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಮೃತರ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಈಗಾಗಲೇ ಹಲವು ಅಪರಾಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಮಡಿಕೇರಿ: ನಿಜಾಮುದ್ದೀನ್ ‘ಕೈ’ ರಾಶಿದ್ ಪತ್ನಿಗೆ ತಾಗಿದ್ದಕ್ಕೆ ಹಲ್ಲೆ..? ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟದ್ದೇಕೆ?

ಸಚಿವಾಲಯದ 3ನೇ ಮಹಡಿಯಿಂದ ಹಾರಿದ ಉಪಸಭಾಪತಿ..! ಸ್ಪೀಕರ್‌ ಜೊತೆಗೆ 7 ಶಾಸಕರೂ ಹಾರಿದ್ರು..!

ಮಂಡಲ ಬರೆದು, ಕೊರಳಲ್ಲಿ ಮೆಣಸಿನಕಾಯಿ, ಲಿಂಬೆಹಣ್ಣು ಕಟ್ಟಿಕೊಂಡು ಆತ್ಮಹತ್ಯೆ..! ಏನಿದು ವಿಚಿತ್ರ ಘಟನೆ?