ಕರಾವಳಿ

ಮಂಗಳೂರು:ಹಾಸ್ಟೆಲ್ ಕಟ್ಟಡದಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ,ಡೆತ್ ನೋಟ್ ಪತ್ತೆ

ನ್ಯೂಸ್ ನಾಟೌಟ್ :ಹಾಸ್ಟೆಲ್ ಕಟ್ಟಡದಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಿಂದ ವರದಿಯಾಗಿದೆ.ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಕೃತಿ ಶೆಟ್ಟಿ (20) ಮೃತ ದುರ್ದೈವಿಯೆಂದು ತಿಳಿದು ಬಂದಿದೆ.

ಮೃತ ವಿದ್ಯಾರ್ಥಿನಿ ಮಂಗಳೂರಿನ ‌ಎ.ಜೆ ಆಸ್ಪತ್ರೆ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದು,ಇಂದು ಮುಂಜಾನೆ 03.00 ಗಂಟೆಗೆ ಎಜೆ ಮಹಿಳಾ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದು ಬಂದಿದೆ.ಈಕೆ ಹಾಸ್ಟೆಲ್‌ನ 6 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ಲಭ್ಯವಾಗಿದೆ.ಜೀವನದಲ್ಲಿ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಪತ್ತೆಯಾಗಿದ್ದು,ಕದ್ರಿ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

Related posts

ಕೊಡಗಿನ ಅರಣ್ಯ ಪ್ರದೇಶದಲ್ಲಿ ಟ್ರಕ್ ಗಟ್ಟಲೇ ತ್ಯಾಜ್ಯ ಎಸೆಯುತ್ತಿರುವ ಕಿಡಿಗೇಡಿಗಳು..!

ಸುಳ್ಯ : ಎನ್ನೆಂಪಿಯುಸಿಯ ವಿದ್ಯಾರ್ಥಿನಿ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆ

ಸುಳ್ಯ: ಬಾದಾಮಿ ಮರವನ್ನು ಕಡಿದ ಮೆಸ್ಕಾಂ ಅಧಿಕಾರಿಗಳು! ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು!