ಕರಾವಳಿಕ್ರೈಂರಾಜ್ಯವೈರಲ್ ನ್ಯೂಸ್

ದರ್ಗಾದ ಮುಂದೆ ಗಣೇಶ ಮೆರವಣಿಗೆ ನಡೆಸಿದ್ದಕ್ಕೆ ಹಿಂಸಾಚಾರ..! 144 ಸೆಕ್ಷನ್‌ ಜಾರಿ, ಶಾಲಾ, ಕಾಲೇಜುಗಳಿಗೆ ರಜೆ..! ಆ ರಾತ್ರಿ ಅಲ್ಲಿ ನಡೆದದ್ದೇನು..?

271
Pc Cr: Public tv

ನ್ಯೂಸ್ ನಾಟೌಟ್: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೋಮುಗಲಭೆ ಸಂಭವಿಸಿದ ಹಿನ್ನೆಲೆಯಲ್ಲಿ ಶನಿವಾರದವರೆಗೆ ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದೆ.

ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬರುತ್ತಿದ್ದಂತೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ದರ್ಗಾ ಬಳಿ ತಮಟೆ, ಡೊಳ್ಳು ಬಾರಿಸದಂತೆ ಕಿರಿಕ್ ಮಾಡಿ ಕಲ್ಲು ತೂರಿದ್ದಾರೆ. ಈ ವೇಳೆ ಎರಡು ಗುಂಪಿನ ಯುವಕರ ಮಧ್ಯೆ ವಾಕ್ಸಮರ ಶುರುವಾಗಿದೆ. ನೋಡನೋಡುತ್ತಿದ್ದಂತೆ ತಳ್ಳಾಟ, ನೂಕಾಟ ನಡೆದಿದೆ.

ಈ ಸಂದರ್ಭದಲ್ಲಿ ಕಿಡಿಗೇಡಿಗಳ ಗುಂಪು ತಲವಾರ್ ಪ್ರದರ್ಶಿಸಿ, ಜೀವ ಬೆದರಿಕೆ ಹಾಕಿದೆ. ದರ್ಗಾ ಬಳಿ ಗಣೇಶ ಮೆರವಣೆಗೆ ಬಂದರೆ ನಿಮ್ಮನ್ನು ಉಳಿಸುವುದಿಲ್ಲ ಎಂಬಂತೆ ಜೀವ ಬೆದರಿಕೆ ಹಾಕಿ ತಲವಾರ್‌ಗಳನ್ನು ತೋರಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕಿಡಿಗೇಡಿಗಳ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಬಳಿಕ ಅವರ ಬಳಿಯಿದ್ದ ತಲವಾರ್‌ ಅನ್ನು ವಶಕ್ಕೆ ಪಡೆದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿದರು.
ಬುಧವಾರ(ಸೆ.12) ರಾತ್ರಿಯಿಂದಲೇ 144 ಸೆಕ್ಷನ್‌ ಜಾರಿ ಮಾಡಲಾಗಿದ್ದು ಇಂದು ಪಟ್ಟಣ ವ್ಯಾಪ್ತಿಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಕರಣ ಸಂಬಂಧ ಇಲ್ಲಿಯವರೆಗೆ 46 ಮಂದಿಯನ್ನು ಬಂಧಿಸಲಾಗಿದೆ.

ಅನ್ಯಕೋಮಿನ ಯುವಕರ ಕೃತ್ಯ ಖಂಡಿಸಿ ಇಂದು ನಾಗಮಂಗಲ ಬಂದ್‌ಗೆ ವಿಶ್ವಹಿಂದೂ ಪರಿಷತ್, ಭಜರಂಗ ದಳ ಹಾಗೂ ಇತರೇ ಹಿಂದೂಪರ ಸಂಘಟನೆಗಳು ಕರೆ ನೀಡಿವೆ. ಹಲವು ಅಂಗಡಿಗಳಿಗೆ ಮತ್ತು ವಾಹನಗಳಿಗೆ ತೀವ್ರ ಹಾನಿಗಳಾಗಿವೆ ಎಂದು ವರದಿ ತಿಳಿಸಿದೆ.

See also  ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget