ಕ್ರೈಂ

ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ!

896

ಮೈಸೂರು: ನಗರದ ಬಡಾವಣೆಯೊಂದರ 17 ವರ್ಷದ ಬಾಲಕಿ ಮೇಲೆ ಆಕೆಯ ಅಣ್ಣನೇ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಗೊತ್ತಾಗಿದೆ.

ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದ ಬಾಲಕಿಯು ಇಬ್ಬರು ಅಣ್ಣಂದಿರ ಜತೆ ವಾಸವಿದ್ದಳು. ಇವರಲ್ಲಿ ಒಬ್ಬಾತ ಮದ್ಯ ಸೇವಿಸಿ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ. ಶನಿವಾರ ಬಾಲಕಿ ಗರ್ಭಿಣಿಯಾಗಿರುವ ವಿಚಾರ ಗೊತ್ತಾಯಿತು. ತನಿಖೆ ನಡೆಸಿದಾಗ ಸ್ವಂತ ಅಣ್ಣನೇ ಇದಕ್ಕೆ ಕಾರಣ ಎಂದು ಬಾಲಕಿ ತಿಳಿಸಿದಳು. ಸದ್ಯ, ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

See also  ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ಮಾಡಿದ್ದವ ರುವಾಂಡಾ ದೇಶದಲ್ಲಿ ಅರೆಸ್ಟ್..! ಭಾರತಕ್ಕೆ ಹಸ್ತಾಂತರ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget