ಕ್ರೈಂವೈರಲ್ ನ್ಯೂಸ್

ಮದುವೆಯಾಗಿದ್ದ ಆಕೆಗೆ ಇನ್ಸ್ಟಾಗ್ರಾಮ್‌ ನಲ್ಲೊಂದು ಲವ್..! ಹೋಟೆಲ್ ಕಟ್ಟಡವೇರಿ ಸಾಯುವುದಾಗಿ ಬೆದರಿಕೆ..!

ನ್ಯೂಸ್ ನಾಟೌಟ್: ಪ್ರೇಮ ವೈಫಲ್ಯಕ್ಕೆ ಬೇಸತ್ತ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ನಂಜನಗೂಡಿನಲ್ಲಿ ನಡೆದಿದೆ. ಬಿಹಾರ ಮೂಲದ ನಾಸಿಂ ಬೇಗಂ(31) ಆತ್ಮಹತ್ಯೆಗೆ ಯತ್ನಿಸಿದವಳು ಎಂದು ಗುರುತಿಸಲಾಗಿದೆ. ಖಾಸಗಿ ಹೋಟೆಲ್‌ನ ಕಟ್ಟಡದ ಮೇಲ್ಭಾಗದಲ್ಲಿ ನಿಂತು ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯುವುದಾಗಿ ಹೇಳಿ ಗಲಾಟೆ ಮಾಡಿದ್ದಾಳೆ.

ಈಗಾಗಲೇ ಮದುವೆ ಆಗಿದ್ದ ಬಿಹಾರ ಮೂಲದ ನಾಸಿಂ ಬೇಗಂ, ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ವಯಸ್ಸಿನಲ್ಲಿ ಚಿಕ್ಕವನ್ನಾಗಿದ್ದ ಆಸಿಬೂರ್ ರೆಹಮಾನ್ ಎಂಬಾತನನ್ನು ಪ್ರೀತಿಸಿದ್ದಳು. ನಂಜನಗೂಡಿನ ಹಿಮ್ಮಾವು ಗ್ರಾಮದಲ್ಲಿ ವಾಸವಾಗಿದ್ದ ಆಸಿಬೂರ್ ರೆಹಮಾನ್ ಏಷಿಯನ್ ಪೈಂಟ್ಸ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ಆಸಿಬೂರ್ ರೆಹಮಾನ್ ಹಾಗೂ ನಾಸಿಂ ಬೇಗಂ ಪರಿಚಯವು ಪ್ರೀತಿಗೆ ತಿರುಗಿತ್ತು. ಆಕೆಯನ್ನು ಕಾಣಲು ಕಾತುರನಾಗಿದ್ದ ಆಸಿಬೂರ ಮಹಿಳೆಯನ್ನು ಕಂಡ ಮೇಲೆ ಮನಸ್ಸು ಬದಲಾಗಿತ್ತು.

ಯಾಕೆಂದರೆ ನಾಸಿಂ ಬೇಗಂಗೆ ಈಗಾಗಲೇ ಮದುವೆ ಆಗಿತ್ತು. ಜತೆಗೆ ವಯಸ್ಸಿನ ಅಂತರ ಹೆಚ್ಚಿದೆ ಎಂದು ಮದುವೆ ಸಾಧ್ಯವಿಲ್ಲ ಎಂದಿದ್ದ. ಯುವಕನ ಮಾತಿನಿಂದ ಸಿಟ್ಟಿಗೆದ್ದ ವಿವಾಹಿತೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದಾಳೆ. ಯುವಕ ಮದುವೆಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ನಾಸಿಂ ಬೇಗಂ ತಾನು ತಂಗಿದ್ದ ಹೋಟೆಲ್‌ನ ಕಟ್ಟಡ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇತ್ತ ವಿಷಯ ತಿಳಿಯುತ್ತಿದ್ದಂತೆ ನಂಜನಗೂಡು ಪಟ್ಟಣ ಪೊಲೀಸರು ಸ್ಥಳಕ್ಕಾಗಮಿಸಿ, ನಾಸಿಂ ಬೇಗಂನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಸ್ಲೋವಾಕಿಯಾ ದೇಶದ ಪ್ರಧಾನಿ ಮೇಲೆ ಗುಂಡಿನ ದಾಳಿ..! ಇಲ್ಲಿದೆ ವೈರಲ್ ವಿಡಿಯೋ

ಮರದಿಂದ ಮಾಡಿದ ಈ ಕಾರಿಗೆ ಕೋಟಿ ಬೆಲೆ! ಈ ಕಾರಿನಲ್ಲಿ ಅಂತದ್ದೇನಿದೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಸುಳ್ಯದ ಜಟ್ಟಿಪಳ್ಳ ತಿರುವಿನ ಬಳಿ ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ..! ವಾಹನಗಳು ಜಖಂ..!