ಕ್ರೈಂಬೆಂಗಳೂರುವೈರಲ್ ನ್ಯೂಸ್

ವಿಧವೆಯನ್ನು ಮದುವೆಯಾಗಿದ್ದ ಪೊಲೀಸ್ ವಿರುದ್ಧ ಕೇಸ್..! ಕೊಲೆ ಪ್ರಕರಣವೊಂದರಲ್ಲಿ ಠಾಣೆಗೆ ಬಂದಿದ್ದ ಮಹಿಳೆ ಜೊತೆ ಮದುವೆ..!

ನ್ಯೂಸ್ ನಾಟೌಟ್: ವಿಧವೆಯನ್ನು ಮದುವೆಯಾಗಿದ್ದ ಪೊಲೀಸ್ ಕಾನ್‌ ಸ್ಟೇಬಲ್ ವಿರುದ್ಧವೇ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಶೇಷಾದ್ರಿಪುರಂ ಠಾಣೆ ಕಾನ್‌ ಸ್ಟೇಬಲ್ ಮನೋಜ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.

ಕೊಲೆ ಪ್ರಕರಣವೊಂದರಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮಹಿಳೆಯನ್ನು ಕಾನ್‌ ಸ್ಟೇಬಲ್ ಮನೋಜ್ ಬುಟ್ಟಿಗೆ ಹಾಕಿಕೊಂಡಿದ್ದ ಎಂಬ ಆರೋಪಗಳಿವೆ. 2016 ರಲ್ಲಿ ಮಹಿಳೆಯ ಪತಿ ಕೊಲೆಯಾಗಿದ್ದ. ಈ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಆರೋಪಿ ಮನೋಜ್ ಶೇಷಾದ್ರಿಪುರಂ ಠಾಣೆಯಲ್ಲಿ ಕಾನ್ಸ್ ಸ್ಟೇಬಲ್ ಆಗಿದ್ದ.

ಪತಿಯ ಕೇಸ್ ಸಲುವಾಗಿ ಆರೋಪಿಗಳಿಗೆ ಸಮನ್ಸ್ ಜಾರಿಯಾಗಿತ್ತು. 2019 ರಲ್ಲಿ ಸಮನ್ಸ್ ಕಾಪಿ ಕೊಡಲು ಶೇಷಾದ್ರಿಪುರಂ ಠಾಣೆಗೆ ಮಹಿಳೆ ತೆರಳಿದ್ದರು. ಆಗ ಕಾನ್ಸ್ಟೇಬಲ್ ಮನೋಜ್ ಆಕೆಯ ನಂಬರ್ ಕೇಳಿ ಪಡೆದಿದ್ದ. 2024 ರವರೆಗೂ ಸುಮ್ಮನಿದ್ದ ಪೊಲೀಸ್, ಕೆಲ ತಿಂಗಳ ಹಿಂದೆ ಫೋಟೊ ಕಳುಹಿಸುವಂತೆ ಮಹಿಳೆಗೆ ಮೆಸೇಜ್ ಮಾಡಿದ್ದ. ಫೋಟೊ ಕಳಿಸುತ್ತಿದ್ದಂತೆ ಐ ಲವ್ ಯೂ ಎಂದು ಮೆಸೇಜ್ ಹಾಕಿದ್ದ.

ನಾನು ನಿಮ್ಮನ್ನು ಮದುವೆಯಾಗುತ್ತೇನೆ. ಚೆನ್ನಾಗಿ ನೋಡ್ಕೋತಿನಿ ಎಂದು ಮಹಿಳೆಗೆ ಪೊಲೀಸ್ ಪೇದೆ ನಂಬಿಸಿದ್ದ. ಒಳ್ಳೆಯವನು ಎಂದುಕೊಂಡು ಮದುವೆಗೆ ಸಂತ್ರಸ್ತೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. 2024ರ ನ.28 ರಂದು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆಯಾಗಿ ತನ್ನ ಕ್ವಾಟ್ರಸ್‌ ಗೆ ಮಹಿಳೆಯನ್ನ ಮನೋಜ್ ಕರೆತಂದಿದ್ದ. ಆಗ ಕುಟುಂಬಸ್ಥರು ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.

ಬೇರೆಯವರನ್ನ ಮದುವೆಯಾಗಿದ್ದರೆ ವರದಕ್ಷಿಣೆ ಸಿಗುತ್ತಿತ್ತು. ನೀನು ಎರಡು ಮಕ್ಕಳ ತಾಯಿ ಎಂದು ಮನೋಜ್ ಕುಟುಂಬದವರು ಗಲಾಟೆ ಮಾಡಿದ್ದಾರೆ. ಕೆಲ ದಿನದ ನಂತರ ಯಾವಾಗಲೂ ಮೊಬೈಲ್‌ ನಲ್ಲಿ ಪತಿ ಮನೋಜ್ ಬ್ಯುಸಿಯಾಗಿರುತ್ತಿದ್ದ, ಕೇಳಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಆರೋಪ ಕೇಳಿಬಂದಿದೆ. ಗಂಡನ ವರ್ತನೆ ನೋಡಿ ಮನೋಜ್ ಮೊಬೈಲ್ ಚೆಕ್ ಮಾಡಿದಾಗ, ಗೊತ್ತಾಗಿದ್ದು ಕಾನ್ಸ್ಟೇಬಲ್‌ನ ಅಸಲಿಯತ್ತು. ಬೇರೆ ಮಹಿಳೆಯರ ಜೊತೆಗಿದ್ದ ವೀಡಿಯೋ, ಫೋಟೊಗಳು ಮೊಬೈಲ್‌ ನಲ್ಲಿ ಪತ್ತೆಯಾಗಿವೆ.

ಅದನ್ನ ಕೇಳಿದ್ದಕ್ಕೆ ಆಕೆಯ ಮೇಲೆ ಮತ್ತೆ ಹಲ್ಲೆ ಮಾಡಿ ಪತ್ನಿ ಕೈ ಮುರಿದಿದ್ದಾನೆ. ಸದ್ಯ ಪತಿ ಮನೋಜ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Click

Related posts

ಸಿಪಿಎಂ ಮುಖಂಡನ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಮಗನಿಂದಲೇ ಅಪ್ಪನ ಭೀಕರ ಕೊಲೆ! ಡಿಪ್ಲೊಮಾದಲ್ಲಿ ಅನುತ್ತೀರ್ಣನಾಗಿ ಮಾನಸಿಕ ಅಸ್ವಸ್ಥನಾಗಿದ್ದಾತನ ರೋಚಕ ಸ್ಟೋರಿ!

ಶಾಪಿಂಗ್‌ ಮಾಲ್‌ ನಲ್ಲಿ ಆಟಿಕೆ ರೈಲು ಪಲ್ಟಿಯಾಗಿ 10ರ ಬಾಲಕ ಸಾವು..! ಇಲ್ಲಿದೆ ವೈರಲ್ ವಿಡಿಯೋ