ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಮರುದಿನ ಮದುವೆಗೆ ತಯಾರಾಗಿದ್ದ ವಧು ನಿಗೂಢವಾಗಿ ಅಂತ್ಯವಾಗಿದ್ದೇಗೆ? ಮೂರು ಬಾರಿ ಆತನ ಜೊತೆ ಓಡಿಹೋಗಿದ್ದಳು ಎಂದದ್ದೇಕೆ ಪೊಲೀಸರು?

ನ್ಯೂಸ್ ನಾಟೌಟ್: ವಿವಾಹದ ಮುನ್ನಾ ದಿನ ಯುವತಿಯೊಬ್ಬಳು ನಿಗೂಢ ಸಾವಿಗೀಡಾದ ಪ್ರಕರಣ ಉತ್ತರ ಪ್ರದೇಶದ ಪ್ರಯಾಗ್ರಾಜ್ ನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ.

ಯುವತಿಯನ್ನು ಹತ್ಯೆ ಮಾಡಲಾಗಿದ್ದು, ಇದರಲ್ಲಿ ಯುವತಿಯ ಬಾವ ತಾರಾಚಂದ್ರ ಬಿಂದ್ ಎಂಬಾತನ ಕೈವಾಡವಿದೆ ಎಂದು ಕುಟುಂಬದವರು ದೂರು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ.

ರೀನಾ (20) ಎಂಬ ಯುವತಿಯ ಶವ ದಾಲಾಪುರ ಗ್ರಾಮದಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಅಭಿಷೇಕ್ ಭಾರ್ತಿ ಹೇಳಿದ್ದಾರೆ.

ಈ ಮೊದಲು ಮೂರು ಬಾರಿ ಯುವತಿ, ಆರೋಪಿಯ ಜತೆಗೆ ಓಡಿಹೋಗಿದ್ದು, ಹತ್ತು ದಿನಗಳ ಹಿಂದಷ್ಟೇ ವಾಪಸ್ಸಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ. ರೀನಾ ಬೇರೆಯವರ ಜತೆ ವಿವಾಹವಾದರೆ ಆಕೆಯನ್ನು ಹತ್ಯೆ ಮಾಡುವುದಾಗಿ ಬಿಂದ್ ಎಚ್ಚರಿಕೆ ನೀಡಿದ್ದಾಗಿ ರೀನಾಳ ಅಕ್ಕ ಮೀನಾ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.

Related posts

ಹಿಂದೂ ಧರ್ಮ ಅಪಾಯದಲ್ಲಿಲ್ಲ ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ

ಹೃದಯಾಘಾತಕ್ಕೆ ೬ನೇ ತರಗತಿಯ ಬಾಲಕಿ ಬಲಿ,ಆಟವಾಡಿ ಬಂದು ಮಲಗಿದ್ದವಳು ಹೆಣವಾದಳು

ಪ್ರಿಯತಮನೊಂದಿಗೆ ರಾತ್ರಿ ಎಣ್ಣೆ ಪಾರ್ಟಿ..!,ಶಾಶ್ವತ ನಿದ್ದೆಗೆ ಜಾರಿದ ಯುವತಿ ಮರುದಿನ ಬೆಳಗ್ಗೆ ಏಳಲೇ ಇಲ್ಲ..! ಆಗಿದ್ದೇನು?