ನ್ಯೂಸ್ ನಾಟೌಟ್: ಮದುವೆಯಾದ 25ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ವೇಳೆ ವೇದಿಕೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಪತಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬರೇಲಿಯಲ್ಲಿ ಬೆಳಕಿಗೆ ಬಂದಿದೆ.
ಬರೇಲಿಯ ಶೂ ಉದ್ಯಮಿಯಾಗಿರುವ ವಾಸಿಂ ಸರ್ವತ್ ಮತ್ತು ಅವರ ಪತ್ನಿ ಫರಾ ತಮ್ಮ 25 ನೇ ವಿವಾಹ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದರು. ಅದರಂತೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ಸಂಬಂಧಿಕರಿಗೆ ಹಂಚಿದ್ದರು.
ಏಪ್ರಿಲ್ 2 ರಂದು ಬರೇಲಿಯ ಹಾಲ್ ಒಂದರಲ್ಲಿ ರಾತ್ರಿ 8 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಅದರಂತೆ ಸಂಬಂಧಿಕರು, ಸ್ನೇಹಿತರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು ಈ ವೇಳೆ ವಾಸಿಂ ಮತ್ತು ಪತ್ನಿ ಫರಾ ವೇದಿಕೆ ಮೇಲೆ ಹಾಡೊಂದಕ್ಕೆ ನೃತ್ಯ ಮಾಡುತ್ತಿದ್ದರು ಈ ವೇಳೆ ವಾಸಿಂ, ಪತ್ನಿಯ ಎದುರೇ ಏಕಾಏಕಿ ಕುಸಿದು ಬಿದ್ದಿದ್ದಾರೆ.
बरेली डांस के दौरान व्यक्ति को पड़ा दिल का दौरा
शादी की सालगिरह पर पत्नी के साथ कर रहा था डांस pic.twitter.com/QCE8sukfKY— Arjun Chaudharyy5 (@Arjun5chaudhary) April 3, 2025
ಕೂಡಲೇ ಅಲ್ಲಿದ್ದ ಸಂಬಂಧಿಕರು ವಾಸಿಂ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಪರಿಶೀಲಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಇತ್ತ ವಾಸಿಂ ಮೃತಪಟ್ಟ ಸುದ್ದಿ ಗೊತ್ತಾಗುತ್ತಿದ್ದಂತೆ ಪತ್ನಿ ಪ್ರಜ್ಞೆ ತಪ್ಪಿದ್ದಾರೆ, ಸಂಭ್ರಮದಲ್ಲಿದ್ದ ಮನೆ ಮೌನವಾಗಿದೆ.
ಕೊಡಗು: ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣ..! ಶಾಸಕ ಪೊನ್ನಣ್ಣ ಮತ್ತು ಮಂಥರ್ ಗೌಡ ವಿರುದ್ಧ ದೂರು ದಾಖಲು..!