Latest

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಿ.ಎಮ್.ಇ(CME- Continuing Medical education );ವಿಶ್ವ ನಿದ್ರಾ ದಿನದ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮ( ಸ್ಲೀಪ್ & ವೆಲ್ ನೆಸ್ )

227
Spread the love

ನ್ಯೂಸ್ ನಾಟೌಟ್ : ನಿದ್ರೆಯ ಕುರಿತು ಅರಿವು ಮೂಡಿಸಲು ವಿಶ್ವ ನಿದ್ರಾ ದಿನವನ್ನು ಪ್ರತಿ ವರ್ಷ ಮಾರ್ಚ್ ಮೂರನೇ ಶುಕ್ರವಾರ ದಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಾರ್ಚ್ 14 ರಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಉಪನ್ಯಾಸ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ ಡಾ.ಕೆವಿ ಚಿದಾನಂದ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಉತ್ತಮ ಜೀವನಕ್ಕೆ ಉತ್ತಮ ನಿದ್ರೆಯು ಅತ್ಯಗತ್ಯ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಳಿಕ ಕಾಲೇಜಿನ ಡೀನ್ ಡಾ.ನೀಲಾಂಬಿಕೈ ನಟರಾಜನ್ ಪ್ರಾಸ್ತವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವೇದಿಕೆಯಲ್ಲಿ, ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಮಂಗಳೂರಿನ ಫಿಸಿಯೋಲಜಿ ವಿಭಾಗದ ಪ್ರೊಫೆಸರ್ ಡಾ ಹರ್ಷ ಹಾಲಹಳ್ಳಿ, ಯೆನೆಪೋಯ ಮೆಡಿಕಲ್ ಕಾಲೇಜು ಮಂಗಳೂರಿನ ಸೈಕಿಯಾಟ್ರಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ ರಾಜೇಶ್ ಎಮ್, ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಮಂಗಳೂರಿನ ಪಲ್ಮನರಿ ಮೆಡಿಸಿನ್ ವಿಭಾಗದ ಮುಖ್ಯಸ್ಥರು ಪ್ರೊ. ಡಾ ಗಿರಿಧರ್ ಬಿ ಎಚ್, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ ಸರ್ಫರಾಜ್ ಜಮಾಲ್, ಬಯೋಕೆಮಿಸ್ಟ್ರಿ ವಿಭಾಗದ ಪ್ರೊ. ಡಾ ಶೃತಿ ರೈ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಸಿ ಆರ್ ಭಟ್, ಫಿಸಿಯೋಲಜಿ ವಿಭಾಗದ ಮುಖ್ಯಸ್ಥೆ ಪ್ರೊ. ಡಾ ಆರತಿ ರಾವ್, ಅಸೋಸಿಯೇಟ್ ಪ್ರೊಫೆಸರ್ ಡಾ ದಾಮೋದರ್ ಡಿ ಉಪಸ್ಥಿತರಿದ್ದರು.

ಪ್ರಥಮ ಎಮ್. ಬಿ. ಬಿ ಎಸ್ ವಿದ್ಯಾರ್ಥಿನಿಯರಾದ ಅಕ್ಷತಾ ಕಾಮತ್ ಹಾಗೂ ಸುರಭಿ ನಾರಾಯಣ್ ಪ್ರಾರ್ಥಿಸಿದರು, ಡಾ ಆರತಿ ರಾವ್ ಸ್ವಾಗತಿಸಿ ಡಾ ದಾಮೋದರ್ ಡಿ ವಂದಿಸಿದರು, ಫಿಸಿಯೋಲಜಿ ವಿಭಾಗದ ಡಾ ರಕ್ಷತಾ ರಮೇಶ್ ಹಾಗೂ ಡಾ ಸಂಗೀತಾ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ಸ್ಲೀಪ್ ಆಂಡ್ ವೆಲ್ ನೆಸ್ ಕುರಿತಾದ ವಿಶೇಷ ಉಪನ್ಯಾಸ ನಡೆಯಲಿದೆ.

See also  ಇನ್ನು ಮುಂದೆ ಗೇರು ಹಣ್ಣಿನಿಂದ ಬೀಜ ಬಿಡಿಸುವ ಕೆಲಸ ನಿಮಗಿಲ್ಲ!! ಇದಕ್ಕು ಬಂತು ನೋಡಿ ಯಂತ್ರೋಪಕರಣ!! ದೇಶದಲ್ಲೇ ಪ್ರಥಮ ಪ್ರಯೋಗ ಪುತ್ತೂರಿನಲ್ಲಿ!!
  Ad Widget   Ad Widget   Ad Widget   Ad Widget   Ad Widget   Ad Widget