ಕರಾವಳಿ

ಮರ್ಕಂಜದಲ್ಲಿ ಮತ್ತೆ ಗಣಿಗಾರಿಕೆ ಸದ್ದು..! ಕೆರಳಿ ಕೆಂಡವಾದ ಊರುವರು, ಸ್ಥಳಕ್ಕೆ ಓಡೋಡಿ ಬಂದ್ರು ತಹಶೀಲ್ದಾರ್..!

ನ್ಯೂಸ್ ನಾಟೌಟ್: ಮರ್ಕಂಜದಲ್ಲಿ ಮತ್ತೆ ಗಣಿಗಾರಿಕೆ ಸದ್ದು ಮಾಡುತ್ತಿದೆ. ಬಹಳ ಸಮಯದಿಂದ ತಣ್ಣಗಾಗಿದ್ದ ಪ್ರಕರಣಕ್ಕೆ ಇದೀಗ ಮರು ಜೀವ ಬಂದಿದೆ. ಈ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಊರವರ ಮನವಿಗೆ ಸುಳ್ಯ ತಹಶೀಲ್ದಾರ್ ಕ್ಷಿಪ್ರ ಗತಿಯಲ್ಲಿ ಸ್ಪಂದನೆ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಊರವರ ಮನವಿಯನ್ನು ಆಲಿಸಿ ತಾತ್ಕಾಲಿಕವಾಗಿ ಗಣಿಗಾರಿಕೆಯನ್ನು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮರ್ಕಂಜದ ಅಳವುಪಾರೆ ಗಣಿಗಾರಿಕೆಯನ್ನು ಈ ಹಿಂದೆ ನಿಲ್ಲಿಸಲಾಗಿತ್ತು. ಆದರೆ ಈ ಗಣಿಯಲ್ಲಿ ಕಳೆದ ಕೆಲವು ದಿನಗಳಿಂದ ಮತ್ತೆ ಕೆಲಸ ಆರಂಭವಾಗಿತ್ತು. ಈ ಬಗ್ಗೆ ಸ್ಥಳೀಯರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಮಾತ್ರವಲ್ಲ ತಹಶೀಲ್ದಾರ್ ಅವರಿಗೆ ಮನವಿ ಪತ್ರ ನೀಡಿ ಕೂಡಲೇ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದರು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದರು. ಈ ಮನವಿಗೆ ಸ್ಪಂದಿಸಿ ತಹಶೀಲ್ದಾರ್ ಸೋಮವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದರು.

Related posts

ರಾಷ್ಟ್ರದ ಮೊದಲ ಗ್ರಾಮೀಣ ಘನತ್ಯಾಜ್ಯ ಘಟಕ ಇರುವುದು ಕಾರ್ಕಳದಲ್ಲಿ..! ಇಲ್ಲಿ ಎಲ್ಲ 34 ಪಂಚಾಯತ್‌ಗಳ ಘನ ತ್ಯಾಜ್ಯ ವಿಲೇವಾರಿ ನಡೆಯುವುದು ಹೇಗೆ?

ಗಾಳಿಮುಖ ‘ಪಂಚಶ್ರೀ ಮೆಡಿಕಲ್ಸ್ ‘ ಸ್ಥಳಾಂತರಗೊಂಡು ಶುಭಾರಂಭ,ದೀಪ ಬೆಳಗಿಸಿ ಸಂಸ್ಥೆಗೆ ಶುಭ ಹಾರೈಸಿದ ಗಣ್ಯರು

ಮಡಿಕೇರಿ: ಆ್ಯಂಬುಲೆನ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..! ತಾಯಿ-ಮಗು ಆರೋಗ್ಯ..