Uncategorized

ಮರ್ಕಂಜದ ವೃದ್ಧ ನಾಪತ್ತೆ, ನೀರಿನಲ್ಲಿ 5 ಕಿ.ಮೀ. ತನಕ ಮುಳುಗು ತಜ್ಞರಿಂದ ಇಡೀ ದಿನ ಹುಡುಕಾಟ, ಸಿಗದ ಸುಳಿವು

ನ್ಯೂಸ್ ನಾಟೌಟ್: ಮರ್ಕಂಜದ ಸೇವಾಜೆ ಬಳಿ ವಾಸವಿದ್ದ ಬೆಳ್ಯಪ್ಪ ಗೌಡ ಪೆರುಮುಂಡ ಅವರು ಸೆ.9ರಂದು ಕಾಣೆಯಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಸೋಮವಾರ ಬೆಳಗ್ಗಿನಿಂದಲೇ ಪಯಸ್ವಿನಿ ನದಿಯ ಸುತ್ತಮುತ್ತ ಸುಮಾರು 5 ಕಿ. ಮೀ. ವ್ಯಾಪ್ತಿಯಲ್ಲಿ ಮುಳುಗು ತಜ್ಞರು ಹುಡುಕಾಟ ನಡೆಸಿದರು. ಆದರೆ ಬೆಳ್ಯಪ್ಪ ಗೌಡ ಅವರ ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

ಮುಳುಗು ತಜ್ಞ ಹಾಗೂ ಪ್ರಗತಿ ಆಂಬ್ಯುಲೆನ್ಸ್ ಚಾಲಕ ಕಮ್ ಮಾಲೀಕ ಅಚ್ಚು, ಶ್ರೀ ಮುತ್ತಪ್ಪನ್ ಆಂಬ್ಯುಲೆನ್ಸ್ ನ ಚಾಲಕ ಅಭಿಲಾಷ್ , ಶೌರ್ಯ ವಿಪತ್ತು ಘಟಕದ ಚಿದಾನಂದ ಮೂಡನಕಜೆ ಹಾಗೂ ಪ್ರಸನ್ನ ಒಳಗೊಂಡ ತಂಡ ಪಯಸ್ವಿನಿ ನೀರಿನ ಆಳದಲ್ಲಿ ಹುಡುಕಾಟ ನಡೆಸಿತು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಮಂಗಳವಾರ ಕಾಡಿನೊಳಗಿನ ಭಾಗಗಳಲ್ಲಿ ಇದೇ ತಂಡ ಹುಡುಕಾಟ ನಡೆಸಲಿದೆ ಎಂದು ತಿಳಿದು ಬಂದಿದೆ.

Related posts

ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾದ ಡೊನಾಲ್ಡ್ ಟ್ರಂಪ್, ಬೆಂಬಲಿಗರನ್ನು ಉದ್ದೇಶಿಸಿ ಟ್ರಂಪ್ ಭಾಷಣ

ಅಗತ್ಯ ಬಿದ್ದರೆ ಮುಲಾಜಿಲ್ಲದೆ ಕುಮಾರಸ್ವಾಮಿಯನ್ನು ಬಂಧನ ಮಾಡಲಾಗುವುದು ಎಂದ ಸಿದ್ದರಾಮಯ್ಯ..! ಹೆಚ್.ಡಿ.ಕೆ ವಿರುದ್ಧ ರಾಜ್ಯಪಾಲರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ ಎಸ್.ಐ.ಟಿ..!

ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ, ಓರ್ವನನ್ನು ವಶಕ್ಕೆ ಪಡೆದ NIA