ರಾಜಕೀಯ

ಕೊಡಗಿನ ವೀರ ಗೆದ್ದಿದ್ದಕ್ಕೆ 135 ಕಿ.ಮೀ. ನಡೆದು ಹರಕೆ ಸಲ್ಲಿಸಿದ ಅಭಿಮಾನಿಗಳು…ಚಾಮುಂಡಿಬೆಟ್ಟಕ್ಕೆ ನಡೆದೇ ಹೊರಟ ಅಭಿಮಾನಿಗಳು ಯಾರು?

ನ್ಯೂಸ್ ನಾಟೌಟ್ :ಮಡಿಕೇರಿಯಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ನ ಮಂಥರ್ ಗೌಡ ಗೆಲುವಿಗಾಗಿ ಹರಕೆ ಹೊತ್ತಿದ್ದ ಅಭಿಮಾನಿಗಳು ಆ ಹರಕೆ ಈಡೇರಿಸಲೆಂದು 135 ಕಿ.ಮೀ ದೂರ ಪಾದಯಾತ್ರೆ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಿದರು. ಗುರುವಾರ ಕುಶಾಲನಗರ ತಾಲೂಕಿನ ಕೂಡುಮಂಗಳೂರಿನಿಂದ ಆರಂಭಿಸಿದ ಅಭಿಮಾನಿಗಳ ಯಾತ್ರೆಯು ಚಾಮುಂಡಿ ಬೆಟ್ಟದಲ್ಲಿ ಕೊನೆಯಾಗಲಿದೆ ಎಂದು ತಿಳಿದು ಬಂದಿದೆ.

ಈ ಪಾದಯಾತ್ರೆಯಲ್ಲಿ ಸಂತೋಷ್, ಅರುಣ್ ಹಾಗೂ ಮಾದಪ್ಪ ಎಂಬ ಯುವಕರು ಪಾಲ್ಗೊಂಡಿದ್ದು, ಎರಡು ದಿನಗಳ ಕಾಲ ಈ ಈ ಪಾದಯಾತ್ರೆ ಇರಲಿದೆ. ನಾಳೆ ದಿನ ಮೈಸೂರಿಗೆ ತಲುಪಲಿದ್ದು, ನಂತರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಅಭಿಮಾನಿಗಳ ಈ ವಿಶಿಷ್ಟ ಹರಕೆ ಬಗ್ಗೆ ಮಾತನಾಡಿದ ಶಾಸಕ ಮಂಥರ್ ಗೌಡ, ಯುವಕರ ಅಭಿಮಾನಕ್ಕೆ ಚಿರಋಣಿಯಾಗಿದ್ದಾನೆ.

ಚುನಾವಣೆ ಸಮಯದಲ್ಲಿ ಅವರು ನನಗಾಗಿ ತುಂಬಾ ಶ್ರಮಪಟ್ಟಿದ್ದಾರೆ ಎಂದು ಹೇಳಿದ್ರು. ದೇವಾಲಯಕ್ಕೆ ತೆರಳಿದ ಬಳಿಕ ಪೂಜೆಯಲ್ಲಿ ನಾನು ತಾಲೂಕಿನ ಜನರೊಂದಿಗೆ ಪಾಲ್ಗೊಳ್ಳಲಿದ್ದೇನೆ ಎಂದವರು ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ಪವಾಡವೆಂಬಂತೆ ಕಳೆದ 20 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.ಮಂಥರ್ ಗೌಡ 83,949 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ 79,429 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.

Related posts

ಸಚಿವ ರಮೇಶ್ ಜಾರಕಿಹೊಳಿ ಮನೆಗೆ ಡಿಕೆಶಿ ಅಭಿಮಾನಿಗಳು ಅವಾಚ್ಯ ಶಬ್ಧಗಳ ಪೋಸ್ಟರ್ ಅಂಟಿಸಿದ್ದೇಕೆ..? ಅಷ್ಟಕ್ಕೂ ಡಿಸಿಎಂ ಡಿಕೆಶಿಗೂ ರಮೇಶ್ ಜಾರಕಿಹೊಳಿಗೂ ಇರೋ ಗುದ್ದಾಟವೇನು?

ಬಿಜೆಪಿ ಕಾರ್ಯಕರ್ತನ ಹೆಸರು ಬರೆದಿಟ್ಟು ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ

ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಯಾವಾಗ..? ಕ್ಯಾ| ಬ್ರಿಜೇಶ್ ಚೌಟರ ಆಸ್ತಿ ವಿವರ ಇಲ್ಲಿದೆ