ಕ್ರೈಂ

ಮದ್ಯ ಕುಡಿಸಿ ಮಣಿಪಾಲ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ..!

ಉಡುಪಿ: ಇಲ್ಲಿನ ಮಣಿಪಾಲದಲ್ಲಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಅಕ್ಟೋಬರ್ 16 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಗೆ ಆಕೆಯ ಗೆಳೆಯನೇ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಆರ್ಯನ್ ಚಂದಾವನಿ ಬಂಧಿತ ಆರೋಪಿ.

ವಿದ್ಯಾರ್ಥಿನಿಯ ಗೆಳೆಯನಾಗಿದ್ದ ಆರ್ಯನ್ ಅ. 16 ರಂದು ಮಧ್ಯಾಹ್ನ ಕರೆ ಮಾಡಿ ಹೋಟೆಲ್ ಗೆ ಊಟಕ್ಕೆ ಬರುವಂತೆ ಆಹ್ವಾನಿಸಿದ್ದಾನೆ. ಹೋಟೆಲ್ ನಲ್ಲಿ ಮದ್ಯ ಕುಡಿಸಿ ಆಟೋದಲ್ಲಿ ಡ್ರಾಪ್ ಮಾಡುವುದಾಗಿ ಶಿವಳ್ಳಿಯ ರೂಮ್ ಗೆ ಕರೆದುಕೊಂಡು ಹೋಗಿ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಹೊರಗೆ ಹೋಗಲು ಬಿಡದೆ ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದಾನೆ ಎಂದು ವಿದ್ಯಾರ್ಥಿನಿ ಮಣಿಪಾಲ ಪೊಲೀಸರಿಗೆ ದೂರು ನೀಡಿದ್ದಾಳೆ.

Related posts

ಸುಳ್ಯ: ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆಗೈದ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು, ಆ ಒಂದು ಸುಳಿವು ಹಂತಕನ ಜನ್ಮ ಜಾಲಾಡಿತು..!

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾತನ ಬಂಧನ

ಕೊಡಿಯಾಲ ಬೈಲು: ಮನೆಯ ಅಂಗಳದಿಂದ ಅಡಿಕೆ ಕಳವು