ಕರಾವಳಿಮಂಗಳೂರುವೈರಲ್ ನ್ಯೂಸ್

ಮಂಗಳೂರು: ಮೋದಿ ರೋಡ್ ಶೋ ಬಳಿಕ ಯುವಕನಿಗೆ ಏಟು..! ಅಷ್ಟಕ್ಕೂ ಅಲ್ಲೇನಾಯ್ತು..?

ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ರವಿವಾರ(ಎ.15) ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಮುಗಿದ ಬಳಿಕ ಯುವಕನೋರ್ವನಿಗೆ ಏಟು ಬಿದ್ದ ಘಟನೆ ವರದಿಯಾಗಿದೆ. ಮೋದಿ ರೋಡ್ ಶೋ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬಳಿಗೆ ಯುವಕನೋರ್ವ ಮೊಬೈಲ್ ನಂಬರ್ ನೀಡಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆ.

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಮಹಿಳೆಗೆ ಯುವಕನೋರ್ವ ಚೀಟಿಯಲ್ಲಿ ತನ್ನ ಮೊಬೈಲ್ ನಂಬರ್ ಬರೆದು ನೀಡಿದ್ದ. ಈ ವಿಷಯ ಗೊತ್ತಾಗಿ ಆರೋಪಿ ಯುವಕನನ್ನು ಹಿಡಿದ ಮಹಿಳೆಯ ಪತಿ ಆತನ ಮೊಬೈಲ್ ಕಿತ್ತುಕೊಂಡು ಎರಡೇಟು ಬಿಗಿದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಯುವಕರ ತಂಡವೂ ಆರೋಪಿ ಯುವಕನಿಗೆ ಥಳಿಸಿದೆ. ಬಳಿಕ ಸ್ಥಳದಲ್ಲಿದ್ದ ಇತರ ಸಾರ್ವಜನಿಕರು ಪರಿಸ್ಥಿತಿ ತಿಳಿಗೊಳಿಸಿದರು ಎನ್ನಲಾಗಿದೆ.

Related posts

ಉಡುಪಿ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್

ಕಾರ್ಕಳದಲ್ಲಿಸುನಿಲ್ ಕುಮಾರ್ v/s ಉದಯಕುಮಾರ್, ಈ ಸಲ ವಿಜಯದ ಪಟ್ಟ ಯಾರಿಗೆ? ಜನ ಏನು ಹೇಳಿದ್ರು? ನ್ಯೂಸ್ ನಾಟೌಟ್ ಫೀಲ್ಡ್‌ ರಿಪೋರ್ಟ್‌

ಸುಳ್ಯ : ಬಿ.ಸಿ.ಎಂ. ಹಾಸ್ಟೆಲ್ ನಲ್ಲಿ ಬಾಲಕಿ ನೇಣು ಬಿಗಿದು ಆತ್ಮಹತ್ಯೆ