ಕರಾವಳಿಕ್ರೈಂ

ಮಂಗಳೂರು: 9ನೇ ಮಹಡಿಯಿಂದ ಆಯತಪ್ಪಿ ಬಿದ್ದು ಟೆಕ್ನಿಷಿಯನ್ ಸಾವು!

ನ್ಯೂಸ್ ನಾಟೌಟ್: ಕೆಲಸ ನಿರ್ವಹಿಸುತ್ತಿದ್ದ ವೇಳೆ ಅಪಾರ್ಟ್ಮೆಂಟ್ ಒಂದರ ಒಂಭತ್ತನೇ ಮಹಡಿಯಿಂದ ಕಾಲು ಜಾರಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು ನಗರದ ನಂತೂರುನಲ್ಲಿ ನಡೆದಿದೆ.

ಎಸಿ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವಿನಯ್ ಜೋಯೆಲ್ ತಾವ್ರೋ (22) ಮೃತಪಟ್ಟಿದ್ದು, ಇವರು ಕೆಲಸದ ವಿಚಾರವಾಗಿ ನಂತೂರ್ ಬಳಿಯ ಅಪಾರ್ಟ್ಮೆಂಟ್‌ಗೆ ತೆರಳಿದ್ದರು ಎಂದು ವರದಿ ತಿಳಿಸಿದೆ.

ಒಂಭತ್ತನೇ ಮಹಡಿಯಲ್ಲಿ ಟೆಕ್ನಿಷಿಯನ್ ರಿಪೇರಿ ಸಂಬಂಧಿಸಿ ಕಿಟಕಿಯಿಂದ ಸ್ಕ್ರೂ ಹಾಕುವ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದು, ಇದರಿಂದ ಗಂಭೀರ ಗಾಯಗೊಂಡು ವಿನಯ್ ಜೋಯೆಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿ ತಿಳಿಸಿದೆ.

Related posts

ಎಷ್ಟು ವೆಚ್ಚದಲ್ಲಿ ನಿರ್ಮಾಣವಾಗಲಿದೆ ಪ್ರವೀಣ್ ನೆಟ್ಟಾರ್ ಮನೆ? ಎಷ್ಟು ಚದರ ಅಡಿ ವಿಸ್ತೀರ್ಣ ಇದೆ?

ಸುರತ್ಕಲ್: ಅಬ್ದುಲ್ ಜಲೀಲ್ ಹತ್ಯೆ ಪ್ರಕರಣ, ನಿಷೇಧಾಜ್ಞೆ ಮುಂದುವರಿಕೆ

ಇನ್ನೊಬ್ಬನ ಹೆಂಡ್ತಿ ಜೊತೆ ಯುವಕ ಹಿಮಾಚಲ ಪ್ರದೇಶಕ್ಕೆ ಪರಾರಿ..! ಹಿಡಿದು ಕರೆತಂದು ಮಲ-ಮೂತ್ರ ತಿನ್ನಿಸಿ, ಚಪ್ಪಲಿ ಹಾರ ಹಾಕಿದ ಪತಿ..! ಇಲ್ಲಿದೆ ವೈರಲ್ ವಿಡಿಯೋ