ಕರಾವಳಿಕ್ರೈಂ

ಮಂಗಳೂರು: ಬೆಂಕಿ ಕೊಟ್ಟು ಕಾರ್ಮಿಕನನ್ನು ಸುಟ್ಟು ಕೊಂದ ತೌಸಿಫ್..! ವಿದ್ಯುತ್ ಶಾಕ್ ಕಥೆಯ ಹಿಂದಿತ್ತು ನಿಗೂಢ ಕೊಲೆಯ ಕಹಾನಿ!

ನ್ಯೂಸ್ ನಾಟೌಟ್: ಪೆಟ್ರೋಲ್ ಸುರಿದು ಬೆಂಕಿ ಕೊಟ್ಟು ಮಾಲೀಕ ಕಾರ್ಮಿಕನನ್ನು ಕೊಂದ ಘಟನೆ ಶನಿವಾರ ನಡೆದಿದೆ.
ಮಂಗಳೂರಿನ ಮುಳಿಹಿತ್ಲು ಜಂಕ್ಷನ್ ಬಳಿ ಘಟನೆ‌ ನಡೆದಿದ್ದು, ಉತ್ತರ ಭಾರತ ಮೂಲದ ಗಜ್ಞಾನ್ ಜಗು ಎಂಬಾತ ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.

ಮಶುಪಾ ಜನರಲ್ ಸ್ಟೋರ್ ನ ಮಾಲೀಕ ತೌಸಿಫ್ ಹುಸೈನ್ ನಿಂದ ಕೃತ್ಯ ನಡೆದಿದೆ ಎನ್ನಲಾಗಿದ್ದು, ಆರೋಪಿಯು ಆತನನ್ನು ಕೊಂದು ವಿದ್ಯುತ್ ಶಾಕ್ ಎಂದು ಕಥೆ ಕಟ್ಟಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ ಎನ್ನಲಾಗಿದೆ.

ನಿನ್ನೆ ಬೆಳಗ್ಗೆ 7.30 ಕ್ಕೆ ಕೊಲೆ‌ ನಡೆದಿದ್ದು, ಬಳಿಕ ಮಧ್ಯಾಹ್ನ 1.30 ಕ್ಕೆ ಶವವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ವಿದ್ಯುತ್ ಶಾಕ್ ನಿಂದ ಘಟನೆ ಅಂತಾ ತಿರುಚಲು ಯತ್ನಿಸಿದ ಆತನ ಬಗ್ಗೆ ಪೊಲೀಸರು ಸಂಶಯಗೊಂಡು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಸಂಚು ಬಯಲಾಗಿದೆ.
ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತೌಸಿಫ್ ಹುಸೈನ್ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ವೇಶ್ಯಾವಾಟಿಕೆ ದಂಧೆಗೆ ಹೆಣ್ಣು ಮಕ್ಕಳಿಗೆ ಬ್ಲ್ಯಾಕ್ ಮೇಲ್‌: ಕಿಂಗ್ ಪಿನ್ ಹೆಂಡತಿ, ಗಂಡ ಅರೆಸ್ಟ್

ನಗ್ನವಾಗಿ ಕಾಣುವ ನಕಲಿ ಕನ್ನಡಕ ಮಾರಾಟ ಯತ್ನ; ನಾಲ್ವರ ಬಂಧನ

ಮಂಗಳೂರು: ಮಸೀದಿ ಮೇಲೆ ಕಲ್ಲು ತೂರಾಟ ಪ್ರಕರಣ: ಆರು ಮಂದಿ ಬಂಧನ..! 1 ಕಾರು, 2 ಬೈಕ್, 4 ಮೊಬೈಲ್ ಫೋನ್ ಪೊಲೀಸರ ವಶಕ್ಕೆ..!