ಜೀವನ ಶೈಲಿ/ಆರೋಗ್ಯಮಹಿಳೆ-ಆರೋಗ್ಯರಾಜ್ಯ

ಆ ಒಂದು ವಸತಿ ಶಾಲೆಯಲ್ಲಿ 75 ಮಕ್ಕಳಿಗೆ ಮಂಗನಬಾವು ಕಾಯಿಲೆ..! ಶಾಲೆಯ 200ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕಿನ ಭೀತಿ

ನ್ಯೂಸ್‌ ನಾಟೌಟ್: ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಬೃಂದಾವನ ವಸತಿ ಬಡಾವಣೆಯ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗನಬಾವು ಕಾಯಿಲೆ ಇಲ್ಲಿ‌ನ 6 ರಿಂದ 10 ನೇ ತರಗತಿ ಮಕ್ಕಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ತೀವ್ರವಾಗಿ ಹರಡಿದೆ. ಉಳಿದಂತೆ ಜಿಲ್ಲೆಯ ಹಲವೆಡೆ ಕಾಣಿಸಿಕೊಂಡಿದೆ.

ತಕ್ಷಣ ಮಕ್ಕಳನ್ನು ಆಸ್ಪತ್ರೆ ಕರೆದೋಯ್ದು‌ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಕಳೆದ ಎರಡು ದಿನಗಳಲ್ಲಿ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿತ್ತು. ಇದೀಗ ಮತ್ತಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 75 ಕ್ಕೆ ಏರಿಕೆಯಾಗಿದೆ. ಸದ್ಯ ಸೋಂಕಿತ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ. ಆದರೆ ವಸತಿ ಶಾಲೆಯಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು, ಇವರಿಗೆಲ್ಲ ಸೋಂಕಿನ ಆತಂಕ ಶುರುವಾಗಿದೆ.

ಸೋಂಕಿನ ಲಕ್ಷಣಗಳು ಹೆಚ್ಚಾದ ಮಕ್ಕಳನ್ನು ಪಾಲಕರನ್ನು ಕರೆಸಿ ಅವರ ಜತೆಗೆ ಮನೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೋಂಕಿತರನ್ನು ಮುಂಡಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗನಬಾವು ರೋಗವು ನೀರು ಮತ್ತು ಸೋಂಕಿತರ ಸಂಪರ್ಕದಿಂದ ಹರಡುತ್ತದೆ.

Click

https://newsnotout.com/2024/11/worlds-tallest-and-smallest-womens-met-in-london/
https://newsnotout.com/2024/11/govt-school-kannada-news-teacher-arrest-fjf/
https://newsnotout.com/2024/11/kasaragodu-family-issue-women-police-nomore-by-husband-kannada-news-fn/
https://newsnotout.com/2024/11/darshan-thugudeepa-kannada-news-highcourt-lawyer-kannada-news-d/
https://newsnotout.com/2024/11/bus-car-lorry-rayachur-kannada-news-bengaluru-viral-news-d/
https://newsnotout.com/2024/11/marriage-function-kannada-news-viral-video-bengaluru/
https://newsnotout.com/2024/11/naxal-kannada-news-encounter-chattisghar-d/

Related posts

ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪದವಿ ಪ್ರದಾನ ಕಾರ್ಯಕ್ರಮ ಸಂಪನ್ನ, ಡಾ|ಎಸ್ ಟಿ ಶ್ರೀನಿವಾಸ್ ಮೂರ್ತಿ, ಡಾ ಕೆವಿ ಚಿದಾನಂದ ಸೇರಿದಂತೆ ಗಣ್ಯರು ಭಾಗಿ

ಜನವರಿ 20 ರ ಬಳಿಕ ಮದ್ಯದ ದರಗಳಲ್ಲಿ ಏರಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಹಾಸಿಗೆ ಹಿಡಿದ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು..! ಅಷ್ಟಕ್ಕೂ ಅವರಿಗೇನಾಯ್ತು..?