ಕರಾವಳಿಕ್ರೈಂಮಂಗಳೂರುವೈರಲ್ ನ್ಯೂಸ್

ಮಂಗಳೂರು: ಮನೆಯವರಿಗೆ ಹಲ್ಲೆ ಮಾಡಿ ಕಾರು ಕದ್ದು ಮುಲ್ಕಿಯಲ್ಲಿ ತಂದಿಟ್ಟ ಕಳ್ಳರು..! ಬೆರಳಚ್ಚು ತಜ್ಞರಿಂದ ಪರಿಶೀಲನೆ

ನ್ಯೂಸ್ ನಾಟೌಟ್: ಮುಲ್ಕಿಯಲ್ಲಿ ಇಂದು(ಜುಲೈ 9) ಬೆಳಗ್ಗೆ ಕಾರೊಂದು ಪತ್ತೆಯಾಗಿದ್ದು, ಅದು ಮಂಗಳೂರಿನ ಉರ್ವಸ್ಟೋರ್ ನ ಮನೆಯೊಂದರಿಂದ ಮುಂಜಾನೆ ಕಳವಾಗಿತ್ತು ಎಂದು ತಿಳಿದುಬಂದಿದೆ.

ಮಂಗಳೂರಿನ ಉರ್ವಸ್ಟೋರ್ ಸಮೀಪದ ಕೋಟೆಕಣಿ ಒಂದನೇ ಕ್ರಾಸ್ ನಲ್ಲಿ ಮನೆಯೊಂದಕ್ಕೆ ಮುಂಜಾನೆ ಕಳ್ಳರು ನುಗ್ಗಿದ್ದಾರೆ. ಈ ವೇಳೆ ಮನೆಮಂದಿಗೆ ಹಲ್ಲೆಗೈದು ಚಿನ್ನಾಭರಣ ದೋಚಿದ ಕಳ್ಳರು, ಬಳಿಕ ಅದೇ ಮನೆಯ ಕಾರನ್ನೂ ಕದ್ದಿದ್ದಾರೆ.

ಅದೇ ಕಾರಿನಲ್ಲಿ ಮುಲ್ಕಿಯ ವರೆಗೆ ಬಂದ ಕಳ್ಳರು ಇಲ್ಲಿನ ಆಧಿದನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅಪರಿಚಿತ ಕಾರೊಂದು ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಪತ್ತೆಯಾಗಿರುವ ಕಾರಣ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ.

Click 👇

https://newsnotout.com/2024/07/one8-commune-pub-virat-kohili-kannada-news-bengaluru-fir

Related posts

ಸುಳ್ಯ: ಎನ್‌ಎಂಸಿಯಲ್ಲಿ ಮಹಿಳಾ ಏಕತಾ ದಿನಾಚರಣೆ, ವಿದ್ಯಾರ್ಥಿಗಳೊಂದಿಗೆ ಸಂವಾದ ವಿಚಾರ ವಿನಿಮಯ

ಭಾರತ ಮಾತೆಯ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ವಿಕೃತಿ..! ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟ ವ್ಯಕ್ತಿಯ ಬಂಧನ

ಸ್ವಾಮೀಜಿ ಮೇಲೆ ಭಕ್ತರಿಂದ ಮೆಣಸಿನ ಪುಡಿಯಿಂದ ಅಭಿಷೇಕ..! ಏನಿದು ವಿಚಿತ್ರ ಆಚರಣೆ..?