ಕರಾವಳಿಕ್ರೈಂಮಂಗಳೂರು

ಮಂಗಳೂರು: ರಸ್ತೆಯಲ್ಲಿಯೇ ನಮಾಜ್‌ ಮಾಡುತ್ತಿರುವ ವೀಡಿಯೋ ವೈರಲ್‌..! ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಅಡ್ಡಿ ಆರೋಪ

ನ್ಯೂಸ್ ನಾಟೌಟ್: ನಡುರಸ್ತೆಯಲ್ಲೇ ನಮಾಜ್‌ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಗುತ್ತಿದ್ದು, ಕಂಕನಾಡಿಯಲ್ಲಿ, ನಡುರಸ್ತೆಯಲ್ಲಿಯೇ ಕೆಲ ಯುವಕರು ನಮಾಜ್ ಮಾಡಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಮೇ ತಿಂಗಳ ಕೊನೇಯ ವಾರದಲ್ಲಿ (ಕೆಲ ದಿನಗಳ ಹಿಂದೆ) ನಡೆದಿದೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಮಾಜ್‌ನಿಂದಾಗಿ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮಸೀದಿ ಮುಂಭಾಗ ಇರುವ ರಸ್ತೆಯಲ್ಲಿ ನಮಾಜ್ (Namaz) ಮಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ರಸ್ತೆಯಲ್ಲಿಯೇ ನಮಾಜ್‌ ಮಾಡಿರುವುದನ್ನು ಶ್ರೀರಾಮ ಸೇನೆ ಖಂಡಿಸಿದ್ದು, ಇಂತಹ ಕೃತ್ಯಗಳನ್ನು ಪೊಲೀಸರು ತಡೆಯಬೇಕು ಎಂದು ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್‌ ಮತ್ತು ವಿಭಾಗ ಅಧ್ಯಕ್ಷ ಮಧುಸೂದನ್‌ ಉರ್ವಸ್ಟೋರ್‌ ಪ್ರಕಟಣೆ ನೀಡಿದ್ದಾರೆ.

Click 👇

https://newsnotout.com/2024/05/kiccha-in-tulunadu-and-speech-kannada-news
https://newsnotout.com/2024/05/nmc-talent-hire-2k24-news-innaguaration

Related posts

ಕಲ್ಲುಗುಂಡಿ: ಕತ್ತಲಲ್ಲೂ ಹಾರಾಡಿದ ರಾಷ್ಟ್ರಧ್ವಜ, ಫೋಟೋ ವೈರಲ್

‘ಅಹಂ’ ಪಕ್ಕಕ್ಕಿಟ್ಟರೆ ಮಾತ್ರ ಜೀವನದಲ್ಲಿ ಸಕ್ಸಸ್ ..! K.V.G. ‘Graduation day’ ಕಾರ್ಯಕ್ರಮದಲ್ಲಿ ಡಾ|ನಾಗಲಕ್ಷ್ಮಿ ಚೌಧರಿ ಮೈನವಿರೇಳಿಸಿದ ಭಾಷಣ

ಸುಳ್ಯ:ಬಸ್-ಬೈಕ್ ಮಧ್ಯೆ ಅಪಘಾತ,ಬೈಕ್ ಸವಾರನಿಗೆ ಗಂಭಿರ ಗಾಯ