ಉಡುಪಿಕರಾವಳಿಮಂಗಳೂರು

ಮಂಗಳೂರು: ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಬಾಣಂತಿ ಆತ್ಮಹತ್ಯೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಮಂಗಳೂರಿನ ಲೇಡಿಗೋಷನ್ ಹೆರಿಗೆ ಅಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಬಾಣಂತಿಯೊಬ್ಬರು ಸೋಮವಾರ(ನ.11) ಆತ್ಮಹತ್ಯೆಮಾಡಿಕೊಂಡ ಘಟನೆ ನಡೆದಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ರಂಜಿತಾ ಆಚಾರ್ಯ (28) ಮೃತರು ಎಂದು ಗುರುತಿಸಲಾಗಿದೆ.

ರಂಜಿತಾಗೆ ಅವಧಿ ಪೂರ್ವ ಪ್ರಸವವಾಗಿತ್ತು. ಅ.30ರಂದು ಸಿಸೇರಿಯನ್ ಮೂಲಕ ಹೆರಿಗೆ ನಡೆದಿತ್ತು‌. ಐಸಿಯುವಿನಲ್ಲಿ ಅರೈಕೆಯಲ್ಲಿದ್ದ ಶಿಶು ನ.3ರಂದು ಮೃತಪಟ್ಟಿತ್ತು. ರಂಜಿತಾ ಇದರಿಂದ ತೀವ್ರವಾಗಿ ನೊಂದಿದ್ದರು. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಬೇಕಿತ್ತು. ಅಷ್ಟರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ರಂಜಿತಾ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯಲು ಮನೆಯವರು ಕೂಡ ಲೇಡಿಗೋಷನ್ ಆಸ್ಪತ್ರೆಗೆ ಬಂದಿದ್ದರು. ಆದರೆ ರಂಜಿತಾ ಏಕಾಏಕಿ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

Click

https://newsnotout.com/2024/11/india-justice-sanjeev-khanna-kannada-news-india-supreme-court/
https://newsnotout.com/2024/11/prajwal-revanna-kannada-news-supreme-court-kannada-news-d/
https://newsnotout.com/2024/11/gps-kannada-news-eagle-viral-news-karavara-case/
https://newsnotout.com/2024/11/ksrtc-kananda-news-google-pay-phone-pay-viral-news/
https://newsnotout.com/2024/11/jameer-ahamad-khan-kannada-news-governer-of-karnataka-viral-news/
https://newsnotout.com/2024/11/actor-duniya-vijaya-kannada-news-jail-issue-bail-matter-fjf/

Related posts

ಬಂಟ್ವಾಳ: 20 ಕಿ.ಮೀ ದೂರದಲ್ಲಿ ಕೋಮು-ಸಂಘರ್ಷ, ಮತ್ತೊಂದೆಡೆ ಕೋಮು ಸಾಮರಸ್ಯ..! ಹಬ್ಬದ ಮೆರವಣಿಗೆಯಲ್ಲಿ ಬಂದ ಮುಸ್ಲಿಮರಿಗೆ ಸಿಹಿ ಹಂಚಿ ಶುಭಾಶಯ ಕೋರಿದ ಹಿಂದೂಗಳು

ಎತ್ತಿನಹೊಳೆ ಯೋಜನೆ ಲೋಕಾರ್ಪಣೆಗೆ ಸಿಎಂ ಜೊತೆ ಹೊರಟ ವಾರ್ತಾ ಇಲಾಖೆಯ ವಾಹನದ ಬ್ರೇಕ್ ಫೇಲ್..! ಪತ್ರಕರ್ತರ ವಾಹನ ಲಾರಿಗೆ ಡಿಕ್ಕಿ..!

ಅರಂತೋಡು :ಚಲಿಸುತ್ತಿದ್ದ ಸ್ಕೂಟಿಗೆ ಹಿಂಬದಿಯಿಂದ ಟೆಂಪೋ ಡಿಕ್ಕಿ, ಸ್ಕೂಟಿ ಸವಾರನ ತಲೆಗೆ ಗಂಭೀರ ಗಾಯ