ಕರಾವಳಿ

ಮಂಗಳೂರು: ಕಸ ತೆಗೆಯುವ ಪೌರ ಕಾರ್ಮಿಕನ ಮೇಲೆ ವ್ಯಕ್ತಿಯಿಂದ ಹಲ್ಲೆ , ಸುರತ್ಕಲ್ ಠಾಣೆಯಲ್ಲಿ ದೂರು ದಾಖಲು

ನ್ಯೂಸ್ ನಾಟೌಟ್ : ಮನೆ ಮನೆ ಕಸ ಸಂಗ್ರಹಿಸುವ ಮಹಾನಗರ ಪಾಲಿಕೆಯ ಪೌರ ಕಾರ್ಮಿಕನ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಬಳಿಯ ಸದಾಶಿವ ನಗರದಲ್ಲಿ ನಡೆದಿದೆ.

ಕಾರ್ಮಿಕ ರಾಜು ಹಲ್ಲೆಗೀಡಾದ ಎಂದು ತಿಳಿದು ಬಂದಿದೆ. ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾರ್ಮಿಕನ ಮೇಲಿನ ಹಲ್ಲೆ ಘಟನೆಯನ್ನು ಪೌರ ಕಾರ್ಮಿಕರ ಸಂಘಟನೆ ಖಂಡಿಸಿದೆ. ಭಾನುವಾರ ಮಂಗಳೂರು ನಗರದಾದ್ಯಂತ ಕಸ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದರು.ಹಲ್ಲೆ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲ್ಲೆ ಘಟನೆ ಬಗ್ಗೆ ಮಂಗಳೂರು ಸಫಾಯಿ ಕರ್ಮಚಾರಿ ಯೂನಿಯನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಯೂನಿಯನ್ ಉಪಾಧ್ಯಕ್ಷ ಸುಧೀರ್ ಕುಲಾಲ್ ಹೇಳಿಕೆ ನೀಡಿದ್ದು ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕರ ಮೇಲೆ ನಿರಂತರ ಹಲ್ಲೆ , ಕಿರುಕುಳಗಳು ನಡೆಯುತ್ತಿದೆ. ಇದನ್ನು ಸಂಘ ಖಂಡಿಸಿ ಭಾನುವಾರ ಮಂಗಳೂರು ನಗರದಾದ್ಯಂತ ಕಸ ಸಂಗ್ರಹ ಸ್ಥಗಿತ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

Related posts

ದಕ್ಷಿಣ ಕನ್ನಡದಲ್ಲಿ ನೋಟಾ ಹವಾ, ಬಿಜೆಪಿಯ ದೊಡ್ಡ ಗೆಲುವಿನ ಅಂತರವನ್ನು ತಗ್ಗಿಸುತ್ತಾ ನೋಟಾ..?

ಕೊಡಗು: 2,995 ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್..! 104 ಕಡೆಗಳಲ್ಲಿ ಭೂಕುಸಿತದ ಸಾಧ್ಯತೆ..!

ಸುಳ್ಯ: ಪ್ರೊ ಕಬಡ್ಡಿ ಖ್ಯಾತಿಯ ತೆಲುಗು ಟೈಟಾನ್ಸ್ ಕೋಚ್ ಜಗದೀಶ್ ಕುಂಬ್ಳೆ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಕಚೇರಿಗೆ ಭೇಟಿ, ಸಂಸ್ಥೆ ವತಿಯಿಂದ ಗೌರವ ಸನ್ಮಾನ