ಕ್ರೈಂ

ಮರ್ಡರ್ ಕೇಸ್‌: ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

ನ್ಯೂಸ್ ನಾಟೌಟ್:  ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಂಗಳೂರು ಪೊಲೀಸರು  ಬಂಧಿಸಿದ್ದಾರೆ.

ಜಯಾನಂದ ಆಚಾರ್ಯ ಕೊಲೆಯಾದವರು. ಕುಂಜತ್ತ್ ಬೈಲ್ ದೇವಿನಗರ ರಾಜೇಶ್ ಪೂಜಾರಿ ಪ್ರಕರಣದ ಆರೋಪಿ. ನಗರದ ಹರಿಪದವು ಕಿಯೋನಿಕ್ಸ್ ಗೆ ಸಂಬಂದಪಟ್ಟ ಖಾಲಿ ಜಾಗದಲ್ಲಿ  ಜಯಾನಂದರ ಕುತ್ತಿಗೆಗೆ ಪ್ಲಾಸ್ಟಿಕ್ ಕೆಂಪು ದಾರದಿಂದ ಬಲವಾಗಿ ಬಿಗಿದು ಕೊಲೆ ಮಾಡಲಾಗಿತ್ತು. ಮೃತ ವ್ಯಕ್ತಿ ನವರಾತ್ರಿ ಸಮಯ ಹೆಣ್ಣು ಮಕ್ಕಳ ವೇಷ ಧರಿಸುತ್ತಿದ್ದವರಾಗಿದ್ದು, ವಿಪರಿತವಾದ ಆಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದವರಾಗಿರುತ್ತಾರೆ.  ಕಾವೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Related posts

ಸಿಎಂ ಬಡವರ ಖಾತೆಗೆ 5 ಸಾವಿರ ರೂ. ಹಾಕುತ್ತಾರೆ ಎಂದು ವಾಟ್ಸಪ್‌ ನಲ್ಲಿ ಸಂದೇಶ ಹರಿಬಿಟ್ಟ ಕಿಡಿಗೇಡಿಗಳು..! ವದಂತಿ ನಂಬಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ನೂರಾರು ಜನ..!

ಹೆಂಡ್ತಿ ಕೋಳಿ ಸಾರು ಮಾಡದ್ದಕ್ಕೆ ಬೇಸರ , ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ

ಶಬರಿಮಲೆ ದೇವಸ್ಥಾನಕ್ಕೆ ಕೋರ್ಟ್ ನೀಡಿದ ಎಚ್ಚರಿಕೆ ಏನು? ವಕೀಲರ ತಂಡವನ್ನು ಶಬರಿಮಲೆಗೆ ಕಳುಹಿಸಲು ಹೈಕೋರ್ಟ್ ತೀರ್ಮಾನಿಸಿದ್ದೇಕೆ?