ನ್ಯೂಸ್ ನಾಟೌಟ್: ಸಕಲೇಶಪುರ ತಾಲೂಕಿನ ಯಡಕುಮಾರಿ ಘಾಟ್ ಸೆಕ್ಷನ್ ನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಪರಿಣಾಮ ಬೆಂಗಳೂರು- ಮಂಗಳೂರು ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.
ಇದೀಗ ಸುಬ್ರಹ್ಮಣ್ಯ, ಮಂಗಳೂರಿಗೆ ಬರುತ್ತಿದ್ದ ರೈಲುಗಳು ಪರ್ಯಾಯ ಮಾರ್ಗದ ಮೂಲಕ ಬರಬೇಕಿದೆ. ಪ್ರಯಾಣಿಕರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.