ಕರಾವಳಿವಿಡಿಯೋ

ಮಂಗಳೂರು: ಏರ್ ಇಂಡಿಯಾ(Air India) ವಿಮಾನ ತಡವಾಗಿದ್ದಕ್ಕೆ ರೊಚ್ಚಿಗೆದ್ದ ಪ್ರಯಾಣಿಕರಿಂದ ವಿಮಾನ ನಿಲ್ದಾಣ(Airport)ದಲ್ಲೇ ಗಲಾಟೆ, EXCLUSIVE ವಿಡಿಯೋ(Video) ಇಲ್ಲಿದೆ ವೀಕ್ಷಿಸಿ

ನ್ಯೂಸ್ ನಾಟೌಟ್: ಮಂಗಳೂರಿನಿಂದ ದುಬೈಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ರೊಚ್ಚಿಗೆದ್ದು ಗಲಾಟೆ ಮಾಡಿದ ಘಟನೆ ಮಂಗಳವಾರ ನಡೆದಿದೆ. ಕಾದು ಸುಸ್ತಾಗಿದ್ದ ಪ್ರಯಾಣಿಕರ ತಾಳ್ಮೆಯ ಕಟ್ಟೆಯೊಡೆದು ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ.

ಮಂಗಳವಾರ ರಾತ್ರಿ 11.15 ಕ್ಕೆ ಮಂಗಳೂರು ಏರ್ ಪೋರ್ಟ್‌ನಿಂದ ದುಬೈ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನ ಸ್ಥಗಿತಗೊಂಡಿದೆ. ಆ ವಿಮಾನವು ತಾಂತ್ರಿಕ ತೊಂದರೆಯಿದ್ದ ಹಿನ್ನೆಲೆಯಲ್ಲಿ ತಿರುವನಂತಪುರಕ್ಕೆ ತೆರಳಿತ್ತು. ಏರ್ ಇಂಡಿಯಾ ಬೇಸ್‌ನಲ್ಲಿ ರಿಪೇರಿಗೊಂಡು ಬೇಗ ಬರಬಹುದು ಅನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಬೆಳಗ್ಗೆ 9 ಗಂಟೆಗೆ ತಾಂತ್ರಿಕ ತೊಂದರೆ ನಿವಾರಿಸಿ ಬರುತ್ತದೆ ಎಂದು ಹೇಳಲಾಗಿದ್ದ ವಿಮಾನ ಎಷ್ಟು ಹೊತ್ತಾದರೂ ಬರಲೇ ಇಲ್ಲ. ರಾತ್ರಿಯಿಂದಲೇ ಮಂಗಳೂರು ವಿಮಾನ ನಿಲ್ದಾಣದಲ್ಲಿ180ಕ್ಕೂ ಹೆಚ್ಚು ಪ್ರಯಾಣಿಕರು ಸಿಕ್ಕಿಬಿದ್ದಿದ್ದರು. ಇದೇ ವೇಳೆ ಸಹನೆಯ ಕಟ್ಟೆ ಒಡೆದುದರಿಂದ ಪ್ರಯಾಣಿಕರು ಏರ್‌ಪೋರ್ಟ್‌ನ ಲಾಂಜ್ ನಲ್ಲಿ ವಾಗ್ವಾದ ನಡೆಸಿದ್ದಾರೆ. ಮಾತ್ರವಲ್ಲ ಏರ್ ಇಂಡಿಯಾ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Related posts

ಮಂಗಳೂರು: ಕೋವಿಡ್ -19 ಎರಡು ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಕಡ್ಡಾಯ

ಚೈತ್ರಾ ಕುಂದಾಪುರ ಮೇಲೆ ಮತ್ತೊಂದು ಎಫ್‌ಐಆರ್‌! ಉಡುಪಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬಯಲು..! ಏನಿದು ಹೊಸಾ ಕೇಸ್?

Chandrayaan3:ಚಂದ್ರಯಾನ-3 ರ ಕ್ಲೈಮ್ಯಾಕ್ಸ್ ಇಂದು!,ಸುಳ್ಯ ಕಲ್ಕುಡ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ