ಕರಾವಳಿ

ಮಂಗಳೂರು: ಕೋವಿಡ್ -19 ಎರಡು ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಕಡ್ಡಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಮಾಲ್ ಗಳು, ಚಿತ್ರಮಂದಿರ ಪ್ರವೇಶಿಸಲು ಕೋವಿಡ್ -19 ಲಸಿಕೆ ಪಡೆದಿರುವ ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸಿದೆ. ಮಂಗಳೂರು ಮಹಾನಗರ ಪಾಲಿಕೆ ಲಸಿಕೆ ಪಡೆಯದೇ ಇರುವವರನ್ನು ಗುರುತಿಸಲು ವಿಶೇಷ ತಂಡಗಳನ್ನು ರಚನೆ ಮಾಡಿದೆ. ನಗರದಲ್ಲಿ ವಿಶೇಷ ಲಸಿಕಾ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಈ ವೇಳೆಯೂ ಲಸಿಕೆ ಹಾಕಿಸಿಕೊಳ್ಳದ ಜನರ ಪಟ್ಟಿಯನ್ನು ಮಾಡಲಾಗುವುದು. ಇದರೊಂದಿಗೆ ನಗರದಲ್ಲಿ ಅರ್ಹ ಜನಸಂಖ್ಯೆಗೆ ಆದಷ್ಟು ಬೇಗ ಲಸಿಕೆ ಹಾಕಲು ಸಹಾಯಕವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ. ವಿ. ರಾಜೇಂದ್ರ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಸಾಂಕ್ರಾಮಿಕ ಪರಿಸ್ಥಿತಿ ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರದಿಂದ ಹೆಚ್ಚುವರಿ ಕಣ್ಗಾವಲು ಕ್ರಮ ಕೈಗೊಳ್ಳಲಾಗುವುದು. ಮಲ್ಟಿಪ್ಲೆಕ್ಸ್ ಗಳು, ಚಿತ್ರಮಂದಿರಗಳು ಮತ್ತು ಥಿಯೇಟರ್ ಗಳು ಶೇ 100 ಪ್ರತಿಶತ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶವಿದ್ದರೂ, ಲಸಿಕೆಯ 2 ಡೋಸ್ ಗಳನ್ನು ಪಡೆದವರನ್ನು ಮಾತ್ರ ಒಳಗೆ ಬಿಡಲಾಗುತ್ತದೆ. ಎರಡು ಡೋಸ್ ಗಳನ್ನು ಪಡೆದಿರುವ ಪ್ರಮಾಣ ಪತ್ರವನ್ನು ಒದಗಿಸಿದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗುವುದು ಎಂದು ಹೇಳಿದರು.

Related posts

ಸುಳ್ಯ: ಕುಕ್ಕುಜಡ್ಕ ಪಿಲಿಕಜೆಯಲ್ಲಿ ಉಚಿತ ಆರೋಗ್ಯ ತಪಾಸಣೆ ,ಚಿಕಿತ್ಸಾ ಶಿಬಿರ; ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಕಾರ್ಯಕ್ರಮ

ಸುಳ್ಯ: ಬಸ್‌ ನಲ್ಲಿ ಕಳೆದು ಹೋದ ಮಗುವಿನ ಚಿನ್ನದ ಸರ, ಪ್ರಾಮಾಣಿಕವಾಗಿ ವಾರೀಸುದಾರರಿಗೆ ಹಿಂತಿರುಗಿಸಿದ ಬಸ್‌ ಮಾಲೀಕ

ಮರ್ಕಂಜ: ಸಿಡಿಲು ಬಡಿದು ಇನ್ವರ್ಟರ್ ಛಿದ್ರ..ಛಿದ್ರ..! ಅಷ್ಟಕ್ಕೂ ಆಗಿದ್ದೇನು..?