ಕರಾವಳಿ

ಮಂಗಳೂರು:ಖಾಸಗಿ ಕಾಲೇಜು ವಿದ್ಯಾರ್ಥಿಯ ಮೇಲೆ ಯುವಕರಿಂದ ನೈತಿಕ ಪೊಲೀಸ್ ಗಿರಿ,ಓರ್ವ ಅರೆಸ್ಟ್

ನ್ಯೂಸ್ ನಾಟೌಟ್ : ಖಾಸಗಿ ಕಾಲೇಜು ವಿದ್ಯಾರ್ಥಿಯ ಮೇಲೆ ಯುವಕರು ನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಫ್ಲ್ಯಾಟ್ ವೊಂದರಲ್ಲಿ ನಡೆದಿದೆ.

ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗೆ ಯುವಕರು ಹ*ಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.ಮಂಗಳೂರಿನ ಬಲ್ಮಠ ಬಳಿಯ ಮತ್ತೊಂದು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಹ*ಲ್ಲೆಯಾಗಿದೆ ಎಂದು ತಿಳಿದು ಬಂದಿದೆ.

ಹುಡುಗಿ ವಿಚಾರಕ್ಕೆ ವಿದ್ಯಾರ್ಥಿಯನ್ನ ಕಿಡ್ನಾಪ್ ಮಾಡಿ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.ಖಾಸಗಿ ಫ್ಲ್ಯಾಟ್‌ನಲ್ಲಿ ಕೂಡಿ ಹಾಕಿ ಮನ ಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಯುವಕರ ತಂಡ ವಿದ್ಯಾರ್ಥಿ ಮೇಲೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ್ದಾರೆ ಎನ್ನಲಾಗಿದೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದ ಇಬ್ರಾಹಿಂ ಫಾಹಿಂ(18)ಗೆ ಥಳಿತಕ್ಕೊಳಗಾದ ಯುವಕ ಎಂದು ತಿಳಿದು ಬಂದಿದೆ.ಸದ್ಯ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಫಾಹಿಂಗೆ ಚಿಕಿತ್ಸೆ ನೀಡಲಾಗುತ್ತಿದೆ.ಸದ್ಯ ಬಂದರು ಠಾಣೆ ಪೊಲೀಸರು ಓರ್ವನ ಬಂಧನವಾಗಿದೆ.

Related posts

ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಶರಣು,ಡೆತ್ ನೋಟ್ ನಲ್ಲೇನಿದೆ?

‘ಅಣ್ಣ ಈ ವಿಳಾಸ ಎಲ್ಲಿ?’ ಎಂದವನ ಎತ್ತಾಕ್ಕೊಂಡು ಹೋದ ಪುತ್ತೂರು ಪೊಲೀಸರು

ಹಿಂದೂ ಯುವತಿ-ಮುಸ್ಲಿಂ ಯುವಕನಿದ್ದ ಕಾರಿನ ಮೇಲೆ ಹಿಂದೂ ಕಾರ್ಯಕರ್ತರ ದಾಳಿ