ಸುಳ್ಯ

ಮಂಡೆಕೋಲು: ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ನ್ಯೂಸ್ ನಾಟೌಟ್: ಸುಳ್ಯದ ಮಂಡೆಕೋಲಿನ ಮಡಿವಾಳಮೂಲೆ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಅಕ್ಟೋಬರ್ 3ರಂದು ಕಾರ್ಯಕ್ರಮ ಆರಂಭವಾಗಲಿದ್ದು ಅಕ್ಟೋಬರ್ 11ರಂದು ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. 11-10-2024 ನೇ ಶುಕ್ರವಾರ ರಾತ್ರಿ 7:30 ಕ್ಕೆ ಸರಿಯಾಗಿ ಶ್ರೀ ಮಹಾದೇವಿಯ ದೊಂದಿ ಸೇವೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ. ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಕೂಡ ನಡೆಯಲಿದೆ. ಈ ಕುರಿತಂತೆ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಂದಿರದ ಪ್ರಧಾನ ಪೂಜಾರಿಯವರಾದ ಕುಶಲ ಮಡಿವಾಳಮೂಲೆ, ಆಡಳಿತ ಸಮಿತಿಯ ಅಧ್ಯಕ್ಷ ಸತೀಶ್ ಮಡಿವಾಳಮೂಲೆ, ಉಪಾಧ್ಯಕ್ಷ ರಮೇಶ್ ಶಿವಾಜಿನಗರ, ಜೊತೆಗೆ ನಿರಂಜನ್ ಮಂಡೆಕೋಲು, ಸುನಿಲ್ ಶಿವಾಜಿನಗರ, ಚರಣ್ ಶಿವಾಜಿನಗರ, ಮೋನಪ್ಪ ಶಿವಾಜಿನಗರ, ಸುಂದರ ಮಡಿವಾಳಮೂಲೆ, ಸದಾನಂದ ಮಡಿವಾಳಮೂಲೆ, ಪ್ರಶಾಂತ್ ಮಡಿವಾಳಮೂಲೆ, ಶುಭಶ್ಚಂದ್ರ ಮಡಿವಾಳಮೂಲೆ, ಅಶ್ವಥ್ ಮಡಿವಾಳಮೂಲೆ, ಸೀತಾರಾಮ ಮಡಿವಾಳಮೂಲೆ, ಕಾರ್ತಿಕ್ ಶಿವಾಜಿನಗರ ಉಪಸ್ಥಿತರಿದ್ದರು

Related posts

ಕೋಲ್ಚಾರಿನಲ್ಲಿ ‘ಓಣಂ ಸಧ್ಯ’, ಸಿಹಿ ತಿಂಡಿ 18 ಬಗೆಯ ಆಹಾರ ಖಾದ್ಯಗಳನ್ನು ಸವಿದ ಜನ

ಕಸಾಪ ಸುಳ್ಯ ಕನ್ನಡ ರಾಜ್ಯೋತ್ಸವ- ಸಾಹಿತ್ಯ ಸಂಭ್ರಮ; ಅತ್ತ್ಯುತ್ತಮ ಶಾಲೆ ಪುರಸ್ಕಾರ ಪಡೆದ ಕೋಲ್ಚಾರು ಶಾಲೆಯ ಸಮಿತಿ ಸದಸ್ಯರಿಗೆ,ಶಿಕ್ಷಕರಿಗೆ ಗೌರವ

ಸುಳ್ಯ: ಗಗನಕ್ಕೇರಿದ ತರಕಾರಿ ಬೆಲೆ, ನೂರರ ಗಡಿ ದಾಟುತ್ತಿದೆ ಟೊಮೇಟೊ! ಗ್ರಾಹಕರ ಜೇಬಿಗೆ ಕತ್ತರಿ