ಕರಾವಳಿಸುಳ್ಯ

ಮಂಡೆಕೋಲು: ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ತೋಟಕ್ಕೆ ನುಗ್ಗಿದ ಕಾಡಾನೆ..! ಬಾಳೆ ತೋಟ, ಅಡಿಕೆ ಗಿಡ ತಿಂದು ತೇಗಿದ ಗಜಪಡೆ..!

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಕಾಡಿನಂಚಿನಲ್ಲಿರುವ ಮನೆಗಳಲ್ಲಿ ಜನರಿಗೆ ಬದುಕುವುದೇ ದೊಡ್ಡ ಸವಾಲಾಗಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಿನುತಾ ಪಾತಿಕಲ್ಲು ತೋಟಕ್ಕೆ ಕಾಡಾನೆ ನುಗ್ಗಿ ಬಾಳೆ ತೋಟ, ಅಡಿಕೆ ಗಿಡವನ್ನು ತಿಂದು ತೇಗಿದೆ. ಇದರಿಂದ ಭಾರಿ ನಷ್ಟವಾಗಿದೆ ಎಂದು ವಿನುತಾ ಪಾತಿಕಲ್ಲು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಮಂಡೆಕೋಲು ಗ್ರಾಮದಲ್ಲಿ ಕಳೆದ ಹಲವು ವರ್ಷದಿಂದ ಆನೆ ಸಮಸ್ಯೆ ಇದೆ. ಹೋದ ವರ್ಷವೂ ಗ್ರಾಮ ಸಭೆಯಲ್ಲಿ ಕಾಡಾನೆ ದಾಳಿಯ ವಿಚಾರವೇ ಭಾರಿ ಚರ್ಚೆಯಾಗಿತ್ತು. ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ವಿನುತಾ ಪಾತಿಕಲ್ಲು, ‘ಗ್ರಾಮದ ಪ್ರಥಮ ಪ್ರಜೆಯಾಗಿ ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತಿದ್ದೇನೆ. ಕಾಡಾನೆ ದಾಳಿಯಿಂದ ಊರಿನ ಜನ ಹೈರಾಣಾಗಿ ಹೋಗಿದ್ದೇವೆ.

ಕೇಂದ್ರ ಸರ್ಕಾರದಿಂದ ಶೀಘ್ರವಾಗಿ ಪರಿಹಾರವನ್ನು ಒದಗಿಸಬೇಕು. ಅಡಿಕೆ-ತೆಂಗು ನಮ್ಮ ಜೀವನಕ್ಕೆ ಮೂಲ ಬೆಳೆಯಾಗಿದೆ. ಇದನ್ನು ಹತ್ತಾರು ವರ್ಷ ಪೋಷಿಸಿ ಕೃಷಿ ಚಟುವಟಿಕೆ ಮಾಡುತ್ತೇವೆ. ಆದರೆ ಈ ಕಾಡಾನೆಗಳು ಕೇವಲ ಐದು ನಿಮಿಷದಲ್ಲಿ ಎಲ್ಲವನ್ನು ಹಾಳು ಮಾಡಿ ಹೋಗುತ್ತಿವೆ. ಹೀಗಾಗಿ ಮಂಡೆಕೋಲು ಗ್ರಾಮದ ಪರವಾಗಿ ಸಭೆಯನಿರ್ಣಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕೊಡುವುದಾಗಿ ತಿಳಿಸಿದ್ದರು.

ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿದ ವಿನುತಾ ಪಾತಿಕಲ್ಲು, ಸರ್ಕಾರ ನಮ್ಮ ನಿರ್ಣಯದ ಪ್ರಕಾರ ತಡೆಗೋಡೆ ನಿರ್ಮಿಸಿದೆ. ಆದರೆ ಸಮರ್ಪಕವಾಗಿ ತಡೆಗೋಡೆ ನಿರ್ಮಿಸದ ಕಾರಣ ಕಾಡಾನೆಗಳು ಸುಲಭವಾಗಿ ಒಳಗೆ ಪ್ರವೇಶ ಮಾಡುತ್ತವೆ ಎಂದು ತಿಳಿಸಿದರು.

Related posts

ಮಗನಿಗೂ ತುಳು ಭಾಷೆಯನ್ನು ಕಲಿಸಿದ್ದರು ನಟಿ ಲೀಲಾವತಿ ಅಮ್ಮ..!,ಕೊನೆಯವರೆಗೂ ಅಮ್ಮ ಮತ್ತು ಮಗ ಮಾತನಾಡಿದ್ದೂ ತುಳುವಿನಲ್ಲೇ..!

ಕಡಬ: 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಪಿಡಿಒ ಲೋಕಾಯುಕ್ತ ಬಲೆಗೆ

ನೆಹರು ಮೆಮೋರಿಯಲ್ ಕಾಲೇಜಿನ ಚಿತ್ರಲೇಖ ಕೆ.ಎಸ್ ಗೆ “ಅತ್ಯುತ್ತಮ ರಾಷ್ಟೀಯ ಸೇವಾ ಯೋಜನ ಅಧಿಕಾರಿ ಪ್ರಶಸ್ತಿ”, ಸ್ಮರಣಿಕೆ ನೀಡಿ ಗೌರವಿಸಿದ ಸಜ್ಜನ ಪ್ರತಿಷ್ಠಾನದ ಉಮ್ಮರ್ ಬೀಜದಕಟ್ಟೆ