ಸುಳ್ಯ

ಸುಳ್ಯ: ಮಂಡೆಕೋಲು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ

ನ್ಯೂಸ್‌ ನಾಟೌಟ್‌: ಒಂದು ಕಾಲದಲ್ಲಿ ಕುಗ್ರಾಮವೆಂದು ಗುರುತಿಸಿಕೊಂಡ ಮಂಡೆಕೋಲು ಇಂದು ಅಭಿವೃದ್ಧಿಗೊಂಡು ಸುಗ್ರಾಮವಾಗಿ ರೂಪುಗೊಂಡಿದೆ ಎಂದು ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು.

ದ.ಕ.ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಮಂಡೆಕೋಲು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆ, ಅಮೃತ ಗ್ರಾಮ ಯೋಜನೆ ಮತ್ತು ಸರ್ಕಾರದ ವಿಶೇಷ ಅನುದಾನದಿಂದ ಕೈಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್, ತಹಶೀಲ್ದಾರ್ ಮಂಜುನಾಥ್, ಪಂಚಾಯತ್ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯೆ ದಿವ್ಯಲತಾ ಚೌಟಾಜೆ ಪ್ರಾರ್ಥಿಸಿದರು. ಪಂಚಾಯತ್ ಸದಸ್ಯ ಬಾಲಚಂದ್ರ ದೇವರಗುಂಡ ಪ್ರಾಸ್ತಾವಿಕ ಮಾತನಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪಿ. ಸ್ವಾಗತಿಸಿದರು. ಶಿವಪ್ರಸಾದ್ ಉಗ್ರಾಣಿಮನೆ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು. ಪಂಚಾಯತ್‌ನ ಮಾಜಿ ಅಧ್ಯಕ್ಷ ರು, ನರೇಗಾ ಮಹಿಳಾ ಕಾರ್ಮಿಕರನ್ನು ಗೌರವಿಸಲಾಯಿತು.

Related posts

ಮುದ್ದಿನ ಶ್ವಾನ ಚಾಂಪ್ ನನ್ನು ಕಳೆದು ಕೊಂಡ ನೋವಲ್ಲಿ ರಮ್ಯಾ ,ಪುತ್ತೂರು ಕಾಂಗ್ರೆಸ್ ರೋಡ್ ಶೋಗೆ ಗೈರು

ಸುಳ್ಯ: ಮೊಬೈಲ್ ರೀಚಾರ್ಜ್ ಗೆ ಬಂದ ಹಿಂದೂ ಹುಡುಗಿಯ ಫೋಟೋ ಕ್ಲಿಕ್ಕಿಸಿದ ಪ್ರಕರಣ, ಮುಸ್ಲಿಂ ಯುವಕನ ಮೇಲೆ ಬಿತ್ತು ಎರಡು ಕೇಸ್..!

ಸುಳ್ಯ: ಕೇಕ್ ಪ್ರಿಯರಿಗೆ ಖುಷಿಯ ಸುದ್ದಿ, ರುಚಿಯಾದ ಕೇಕ್, ಭರ್ಜರಿ ಆಫರ್..! ತಡಮಾಡಬೇಡಿ ನಾಳೆ ಸಿಗುವ ಬಿಗ್‌ ಆಫರ್ ಎಲ್ಲೂ ಸಿಗಲ್ಲ..! ಎಲ್ಲಿ..? ಏನು..? ಇಲ್ಲಿದೆ ಫುಲ್ ಡಿಟೇಲ್ಸ್…