Uncategorized

ಆಸಿಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ನ್ಯೂಸ್ ನಾಟೌಟ್: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆಸಿಡ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃತರನ್ನು ಕಡಬ ತಾಲೂಕು ಇಚ್ಲಂಪಾಡಿಯ ಉರೇಜಾಲ್ ನಿವಾಸಿ ಫಿಲಿಪ್ ಟಿಎಮ್(52) ಎಂದು ತಿಳಿದು ಬಂದಿದೆ.  ಮನೆಯ ತೋಟದಲ್ಲಿ ಆಗಸ್ಟ್‌ 28ರಂದು ಆಸಿಡ್‌ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ತೀವ್ರ ಅಸ್ವಸ್ಥಗೊಂಡ ಅವರನ್ನು ತುರ್ತಾಗಿ ನೆಲ್ಯಾಡಿಯ ಅಶ್ವಿನಿ ಆಂಬುಲೆನ್ಸ್ ನಲ್ಲಿ ಮಂಗಳೂರಿಗೆ ಸಾಗಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಇದ್ದ ಅವರ: ನಿನ್ನೆ ರಾತ್ರಿ 12.30ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಉಪ್ಪಿನಂಗಡಿ ಪೊಲೀಸ್ ಬಲೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಹೆಂಡತಿ ಹಾಗೂ ಒಂದು ಗಂಡು ಒಂದು ಹೆಣ್ಣು ಮಕ್ಕಳು ಇದ್ದಾರೆ.

Related posts

ಶಾಲೆಗೆ ಬಂದಿಲ್ಲ, ಪಾಠನೂ ಮಾಡಿಲ್ಲ, ಆದ್ರೂ 6 ವರ್ಷಗಳಿಂದ ಸಂಬಳ ಪಡೆಯುತ್ತಿದ್ದ ಶಿಕ್ಷಕಿ..! 2920 ದಿನಗಳಲ್ಲಿ 759 ದಿನಗಳು ಮಾತ್ರ ಕೆಲಸ..!

ಬೆಂಗಳೂರಿಗೆ ಬರುತ್ತಿದ್ದ ವಿಮಾನದೊಳಗೆ ಹೊಗೆಬಿಟ್ಟು ಮಹಿಳೆಯ ಕಿತಾಪತಿ..!

ರೈಲಿನಲ್ಲಿ ನಿಗೂಢ ಅಸ್ವಾಭಾವಿಕ ವರ್ತನೆ ತೋರಿದ ವ್ಯಕ್ತಿ! ಕೆಲವೇ ಕ್ಷಣದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!