ಕರಾವಳಿ

ಶಿಷ್ಯನಿಗೆ ಚಾಕು ಇರಿದ ಬಿಜೆಪಿ ಮುಖಂಡ..! ತಾನೇ ಬೆಳಸಿದ್ದ ಶಿಷ್ಯನ ಮೇಲೆ ಹಗೆತನ ಬೆಳೆದದ್ದು ಹೇಗೆ..?

ನ್ಯೂಸ್ ನಾಟೌಟ್: ಫೀಲ್ಡ್‌ ನಲ್ಲಿ ಶಿಷ್ಯನ ಬೆಳೆಸಿದ್ದ ಬಿಜೆಪಿ ಮುಖಂಡನೊಬ್ಬ ಇದೀಗ ಅದೇ ಶಿಷ್ಯನಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಬಿನ್ನಿಪೇಟೆ ವಾರ್ಡ್​ನ ಬಿಜೆಪಿ ಮಾಜಿ ಕಾರ್ಪೊರೇಟರ್ ಎಂದು ತಿಳಿದು ಬಂದಿದೆ. ಗಾಯಾಳು ಬಾಬು ಎಂಬವರು ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಜಿ ಕಾರ್ಪೋರೇಟರ್ ಮಾತುಕತೆಗೆ ಎಂದು ಕರೆದು ಚಾಕು ಇರಿದಿದ್ದಾನೆ. ಬಿಜೆಪಿಯ (BJP) ಮುಖಂಡ ಬಿನ್ನಿಪೇಟೆ ವಾರ್ಡ್ ನ ಮಾಜಿ ಕಾರ್ಪೋರೇಟರ್ ಬಿಟಿಎಸ್ ನಾಗರಾಜ್ ಎಂಬಾತ ಬಾಬು ಎಂಬುವವರಿಗೆ ಚಾಕು ಇರಿದಿದ್ದಾನೆ. ರಾಜಾಜಿನಗರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ರೆಂಡ್ಸ್ ಕ್ಲಬ್ ಬಳಿ ಬಾಬು ಅವರನ್ನು ಕರೆಸಿಕೊಂಡು ಕೃತ್ಯ ಎಸಗಲಾಗಿದೆ. ಬಟನ್ ಚಾಕುವಿನಿಂದ ಹೊಟ್ಟೆಗೆ ಇರಿಯಲಾಗಿದ್ದು ಬಾಬು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಬಾಬು ಎಂಬುವವರು ಬಿಟಿಎಸ್ ನಾಗರಾಜುವಿನ ಶಿಷ್ಯರಾಗಿದ್ದರು. ನಾಗರಾಜ್‌ನ ಎಲ್ಲಾ ಕೆಲಸಗಳನ್ನ ಬಾಬು ಅವರೇ ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ. ಆದರೆ ಇಬ್ಬರ ನಡುವೆ ಮನಸ್ತಾಪಕ್ಕೆ ಏನು ಕಾರಣ ಎನ್ನುವುದು ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಬಿಜೆಪಿ ಮುಖಂಡ ನಾಗರಾಜ್ ಮೇಲೆ ಮಾಗಡಿ ರೋಡ್ ಪೊಲೀಸ್ (Police) ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆರೋಪಿಯ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದ್ದು ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Related posts

ಮೋಂಟಡ್ಕದಲ್ಲಿ ತೋಟದ ಕೆರೆಗೆ ಬಿದ್ದ ಕಾಡುಕೋಣ

ತುಳುನಾಡಿನ ಭೂತಾರಾಧನೆ ಹಿಂದೂ ಸಂಸ್ಕೃತಿ ಅಲ್ಲ

ಕರಾವಳಿಯಲ್ಲಿ ಚಾಕೊಲೆಟ್‌ ರೂಪದಲ್ಲಿ ಮಾದಕ ದ್ರವ್ಯ ಮಾರಾಟ..!, 100 ಕೆಜಿ ಮಾದಕ ದ್ರವ್ಯ ವಶ, ಇಬ್ಬರ ಬಂಧನ