ತುಮಕೂರು: ಮಾತೃಭೂಮಿ ಸೇವಾ ಟ್ರಸ್ಟ್ ತುಮಕೂರು ಇವರ ವತಿಯಿಂದ ಕೊಡಮಾಡುವ ಕರುನಾಡ ಕಣ್ಮಣಿ ಪ್ರಶಸ್ತಿ ಹಾಗೂ ಡಾ. ಅಬ್ದುಲ್ ಕಲಾಂ ಪ್ರಶಸ್ತಿ ಗೆ ಸಾಹಿತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಭಾಜನರಾಗಿದ್ದಾರೆ. ಇವರ ಸಾಹಿತ್ಯ ಕ್ಷೇತ್ರದ ಸಾಧನೆ ಯನ್ನು ಮನಗಂಡು ನವೆಂಬರ್ 21ರಂದು ನಡೆಯಲಿರುವ ಸಂಸ್ಥೆಯ 2ನೇ ವರ್ಷದ ಮಾತೃಭೂಮಿ ಸೇವಾ ಟ್ರಸ್ಟ್ ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ. ಡಾ.ಜ್ಯೋತಿ ಶ್ರೀನಿವಾಸ್ ತಿಳಿಸಿದ್ದಾರೆ. ಲತಾಶ್ರೀ ಸುಪ್ರೀತ್ ಸುಳ್ಯದ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸುಳ್ಯದ ಸುಪ್ರೀತ್ ಮೋಂಟಡ್ಕ ರವರ ಪತ್ನಿ.