Uncategorizedಕ್ರೈಂರಾಜ್ಯವೈರಲ್ ನ್ಯೂಸ್

ಶೀಲ ಶಂಕಿಸಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ..! ಆರೋಪಿ ಪೊಲೀಸ್ ವಶಕ್ಕೆ

ನ್ಯೂಸ್ ನಾಟೌಟ್: ಶೀಲ ಶಂಕಿಸಿ ಪತ್ನಿಯನ್ನು ಪತಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಆನೇಕಲ್ ಹೆಬ್ಬಗೋಡಿ ರಾಮಯ್ಯ ಬಡಾವಣೆಯಲ್ಲಿ ಇಂದು(ಫೆ.5) ಬೆಳಗ್ಗೆ ನಡೆದಿದೆ.

ತಿರುಪಾಳ್ಯ ಮೂಲದ ಗಂಗಾ(27) ಕೊಲೆಯಾದ ಗೃಹಿಣಿ ಎಂದು ಗುರುತಿಸಲಾಗಿದೆ. ಪತ್ನಿಯ ಶೀಲ ಶಂಕಿಸಿ ಮೋಹನ್ ರಾಜ್ ಪ್ರತಿನಿತ್ಯ ಮನೆಯಲ್ಲಿ ಜಗಳ ಮಾಡುತ್ತಿದ್ದನೆನ್ನಲಾಗಿದೆ. ಅದೇ ರೀತಿ ಇಂದು ಬೆಳಗ್ಗೆ ಕೂಡಾ ಪತಿ-ಪತ್ನಿ ಮಧ್ಯೆ ಜಗಳ ನಡೆದಿದೆ.

ಜಗಳ ತಾರಕಕ್ಕೇರಿ ರಸ್ತೆಯಲ್ಲೇ ಗಂಗಾ ಅವರ ಹೊಟ್ಟೆಗೆ ಮೋಹನ್ ರಾಜ್ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕಾಗಮಿಸಿದ್ದ ಹೆಬ್ಬಗೋಡಿ ಪೊಲೀಸರು ಆರೋಪಿ ಮೋಹನ್ ರಾಜ್ ನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಯುತ್ತಿದೆ.

Related posts

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ, ಎಲ್ಲರೂ ಪಾಸ್‌..!

ಊಟ ಮಾಡಿ ಮಲಗಿದ ಒಂದೇ ಕುಟುಂಬದ ನಾಲ್ವರು ಸಾವು..! ಸಾವಿನ ಹಿಂದಿದೆಯಾ ನಿಗೂಢ ಕಾರಣ..! ಗ್ರಾಮಸ್ಥರು ಹೇಳಿದ್ದೇನು..?

‘ಅಪ್ಪ ಹೊಡೆಯುತ್ತಾನೆ’ ಪೊಲೀಸರಿಗೆ ಕರೆ ಮಾಡಿದ 7 ವರ್ಷದ ಮಗು! ಇದಕ್ಕೆ ಪೊಲೀಸ್ ಅಧಿಕಾರಿ ಹೇಳಿದ್ದೇನು?