ಜೀವನಶೈಲಿ

ಹಾವಿನ ದ್ವೇಷ 12 ವರುಷ,ಈ ಹಾವಿನ ದ್ವೇಷ ಕೇವಲ ಒಂದೇ ಗಂಟೆ!!:ಹಾವು ಕೊಂದ ಯುವಕನನ್ನು ಮುಗಿಸಿದ ಮತ್ತೊಂದು ಉರಗ!!

ನ್ಯೂಸ್‌ ನಾಟೌಟ್‌ : ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಮಾತಿದೆ. ತನಗೆ ಹಿಂಸೆ ನೀಡಿದವರ ವಿರುದ್ಧ ಹಾವುಗಳು ಸೇಡು ತೀರಿಸಿಕೊಳ್ಳುತ್ತವೆ. ಈ ಸಂಗತಿಗಳನ್ನು ನಾವು ಸಿನಿಮಾ ಹಾಗೂ ಕಥೆಗಳಲ್ಲಿ ನೋಡಿರುತ್ತೇವೆ. ಇದೀಗ ಇಂತಹ ಘಟನೆಯೊಂದು ಬೆಳಕಿಗೆ ಬಂದಿದೆ.

ಉತ್ತರಪ್ರದೇಶದ ರಾಯ್​​ಬರೇಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಯುವಕನೊಬ್ಬ ಅಸುನೀಗಿದ್ದಾನೆ.ಈತ ಹೊಲದಲ್ಲಿ ಕೆಲಸ ಮಾಡುವ ವೇಳೆ ಹಾವನ್ನು ನೋಡಿ ಅದನ್ನು ಮುಗಿಸಿ ಬಿಟ್ಟಿದ್ದ. ಅಲ್ಲದೇ, ಹಾವಿನ ಮೇಲೆ ಕಾಲಿಟ್ಟು ತುಳಿದು ಹಿಂಸೆ ನೀಡಿದ್ದ. ಇದಾದ ಬಳಿಕ ಕೇವಲ ಒಂದು ಗಂಟೆಯ ನಂತರ ಮತ್ತೊಂದು ಹಾವು ಯುವಕನ ಕೈಗೆ ಕಚ್ಚಿದೆ.ಪರಿಣಾಮ ಆತ ಸಾವಿಗೀಡಾಗಿದ್ದಾನೆ.

ಮೃತ ಯುವಕನನ್ನು ಗೋವಿಂದ್ ಕಶ್ಯಪ್ (32) ಎಂದು ಗುರುತಿಸಲಾಗಿದೆ. ಈತ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ತಮ್ಮ ಗ್ರಾಮದ ನಿವಾಸಿ ಅತುಲ್ ಸಿಂಗ್ ಎಂಬುವರು ಮಂಗಳವಾರ ಬೆಳಗ್ಗೆ ತಮ್ಮ ಹೊಲದಲ್ಲಿ ಭತ್ತ ಕಟಾವು ಮಾಡಿ ಹುಲ್ಲು ಸಂಗ್ರಹಿಸುವಾಗ ಹಾವೊಂದು ಹೊರಬಂದಿತ್ತು. ಈ ವೇಳೆ ಅಲ್ಲಿಯೇ ಇದ್ದ ಗೋವಿಂದ್​ ಹಾವನ್ನು ನೋಡಿ ದೊಣ್ಣೆಯಿಂದ ಹೊಡೆಯಲು ಆರಂಭಿಸಿದರು. ಅಲ್ಲದೆ, ಗಾಯಗೊಂಡಿದ್ದ ಹಾವನ್ನು ತುಳಿದು ಕೊಂದಿದ್ದ.

ಇದಾದ ಬಳಿಕ ಗೋವಿಂದ್​, ಸತ್ತ ಹಾವನ್ನು ಅಲ್ಲಿಯೇ ಬಿಟ್ಟು ಆಹಾರ ಸೇವಿಸಲು ತೆರಳಿದ. ಸ್ವಲ್ಪ ಸಮಯದ ನಂತರ ಮತ್ತೊಂದು ಹಾವು ಸತ್ತ ಹಾವಿನ ಬಳಿ ಬಂದಿತ್ತು. ಸುಮಾರು ಒಂದು ಗಂಟೆಯ ನಂತರ ಗೋವಿಂದ್ ಮತ್ತೆ ಮೈದಾನಕ್ಕೆ ಕೆಲಸ ಮಾಡಲು ಹಿಂತಿರುಗಿದಾಗ ಹಾವು ಗೋವಿಂದ್ ಕೈಗೆ ಕಚ್ಚಿ ಸೇಡು ತೀರಿಸಿಕೊಂಡಿದೆ.

ಹಾವು ಕಚ್ಚಿದ್ದನ್ನು ನೋಡಿದ ಗೋವಿಂದ್ ಮನೆ ಕಡೆ ಓಡಿದ್ದಾನೆ. ಆದರೆ, ನಿತ್ರಾಣಗೊಂಡು ದಾರಿಯಲ್ಲಿ ಬಿದ್ದಿದ್ದಾನೆ. ಗೋವಿಂದನಿಗೆ ನೀರು ಕೇಳಲು ಕೂಡ ಸಾಧ್ಯವಾಗಲಿಲ್ಲ. ಗೋವಿಂದ್​ನನ್ನು ಕಚ್ಚಿದ ಹಾವು ಸಮೀಪದ ಪೊದೆಗಳಿಗೆ ನುಸುಳಿತು. ಹಾವು ಕಚ್ಚಿರುವ ವಿಚಾರ ಕುಟುಂಬಸ್ಥರಿಗೆ ತಿಳಿದು, ಸ್ಥಳಕ್ಕೆ ಬಂದು ಗೋವಿಂದ್​ನನ್ನು ಕರೆದುಕೊಂಡು ನೇರವಾಗಿ ವೈದ್ಯರ ಬಳಿ ಹೋದರು. ಆದರೆ, ತಡವಾದ್ದರಿಂದ ಹಾವಿನ ವಿಷ ಗೋವಿಂದ್​ನ ದೇಹದಾದ್ಯಂತ ಹರಡಿ, ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದರು.ಗೋವಿಂದ್ ಸಾವಿನ ನಂತರ ಮನೆಯಲ್ಲಿ ದುಃಖದ ಕಾರ್ಮೋಡ ಕವಿದಿದೆ. ಅಲ್ಲದೆ, ಗೋವಿಂದನಿಗೆ ಕಚ್ಚಿದ ಹಾವಿಗಾಗಿ ಗ್ರಾಮಸ್ಥರು ಹುಡುಕಾಟ ಮುಂದುವರಿಸಿದ್ದಾರೆ.

Related posts

ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೆ ಈ ಮನೆ ಮದ್ದು ಬೆಸ್ಟ್

ಹೂಸು ಮಾರಾಟ ಮಾಡಿ ವಾರಕ್ಕೆ 38 ಲಕ್ಷ ರೂ.ಗಳಿಸಿದ ಮಹಿಳೆ ಆಸ್ಪತ್ರೆ ಸೇರಿದ್ಯಾಕೆ..?

ಸೇಬನ್ನು ಕಾದ ಎಣ್ಣೆಯಲ್ಲಿ ಬೇಯಿಸಿ ತಿಂದ ವಿಚಿತ್ರ ವ್ಯಕ್ತಿ, ಎಂದೂ ನೋಡದ ಸ್ಪೆಷಲ್..!