ವೈರಲ್ ನ್ಯೂಸ್

ನಟ್ಟು, ಬೋಲ್ಟು, ಕ್ಲಿಪ್‌ ,ಇಯರ್ ಫೋನ್ ನೋಡಿ ಗ್ಯಾರೇಜ್ ಎಂದು ಕನ್ಫ್ಯೂಸ್ ಆಗ್ಬೇಡಿ ಮರ್ರೆ;ಇವಿಷ್ಟು ಸಿಕ್ಕಿದ್ದು ವ್ಯಕ್ತಿಯ ಹೊಟ್ಟೆಯಲ್ಲಿ..!ಅರೆ..!ಇಷ್ಟು ದಿನ ಆ ವ್ಯಕ್ತಿ ಬದುಕಿದ್ದಾದರೂ ಹೇಗೆ?ಇಲ್ಲಿದೆ ಡಿಟೇಲ್ಸ್..

ನ್ಯೂಸ್ ನಾಟೌಟ್ :ನಮಗೆ ಒಂದೊಂದು ಸಲ ಮಾಮೂಲಿ ಊಟ ಮಾಡುವುದಕ್ಕಿಂತ ಒಂದು ತುತ್ತು ಜಾಸ್ತಿ ತಿಂದರೂ ಏನೋ ಒಂದು ರೀತಿಯ ಸಂಕಟ,ಆಯಾಸ ಕಾಣಿಸಿಕೊಳ್ಳೋದಿದೆ.ಅದರಲ್ಲೂ ಹೆಚ್ಚಾಗಿ ಚಾಟ್ಸ್‌ಗಳನ್ನು ತಿಂದರೆ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತೆ.ಈ ಸಮಸ್ಯೆ ಇನ್ನೂ ಜಾಸ್ತಿಯಾದ್ರೆ ವೈದ್ಯರಲ್ಲಿಗೆ ಓಡಬೇಕಾದ ಪರಿಸ್ಥಿತಿ ಬರುತ್ತೆ.

ಆದರೆ ಇಲ್ಲೊಬ್ಬ ವ್ಯಕ್ತಿಯಿದ್ದಾನೆ.ಈತನ ಹೊಟ್ಟೆಯಲ್ಲಿ ಏನಿತ್ತು ಅನ್ನೋದನ್ನು ನೀವು ನೋಡಿದ್ರೆ ಅಚ್ಚರಿ ಪಡುತ್ತೀರಾ?ಇತ್ತೀಚೆಗೆ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಹೋದಾಗ ವೈದ್ಯರೇ ಅಚ್ಚರಿ ಪಟ್ಟಿದ್ದಾರೆ.ಹೊಟ್ಟೆ ನೋವು ಎಂದ ವ್ಯಕ್ತಿಯನ್ನು ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಇದು ವೈದ್ಯ ಲೋಕದಲ್ಲೇ ಒಂದು ವಿಸ್ಮಯ ಎನಿಸಿಕೊಂಡಿದೆ.ಈತನ ಹೊಟ್ಟೆಯಲ್ಲಿ ನಟ್ಟು, ಬೋಲ್ಟು, ಕ್ಲಿಪ್‌ ಸೇರಿ ಒಂದು ಗ್ಯಾರೇಜ್‌ನಲ್ಲಿ ಇರಬೇಕಾದ ವಸ್ತುಗಳು ಎಲ್ಲಾ ಇದ್ದವು. ಅಬ್ಬಾಬ್ಬ..! ಇದನ್ನು ನೋಡಿ ವೈದ್ಯರೇ ದಂಗಾಗಿದ್ದಾರೆ.

ಪಂಜಾಬ್‌ನ ಮೋಗಾ ನಿವಾಸಿಯಾದ ವ್ಯಕ್ತಿಯು ಅಸಹನೀಯ ಹೊಟ್ಟೆನೋವಿನಿಂದ ಬಳಲುತ್ತಿದ್ದರು.ಏನಾಯ್ತು ಇವರಿಗೆ ಅಂತ ಕುಟುಂಬ ಸದಸ್ಯರು ತೀರಾ ಚಿಂತೆಗೊಳಗಾದರು.ಇದಾದ ಬಳಿಕ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ತೆರಳಿದ್ದಾರೆ.ಇವರು ಹೊರಳಾಡುವುದನ್ನು ಗಮನಿಸಿ ವೈದ್ಯರು ಏನೋ ಗಂಭೀರ ಸಮಸ್ಯೆಯೇ ಇರಬೇಕು ಎಂದು ಎಕ್ಸ್‌ರೇ ಮಾಡಿದ್ದಾರೆ.ಎಕ್ಸ್‌ರೇ ವರದಿ ನೋಡಿದ್ದೇ ನೋಡಿದ್ದು, ವೈದ್ಯರಿಗೆ ಶಾಕ್ ನಿಂದ ಹೊರಬರಲು ಕೆಲ ಸಮಯವೇ ಬೇಕಾಯಿತು.ಬಳಿಕ ಸತತ ಮೂರು ತಾಸು ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಅವರ ಹೊಟ್ಟೆಯಲ್ಲಿ ಹತ್ತಾರು ವಸ್ತುಗಳು, ಉಪಕರಣಗಳು ಸಿಕ್ಕಿರುವುದು ವೈದ್ಯರನ್ನು ತಬ್ಬಿಬ್ಬುಗೊಳಿಸುವಂತೆ ಮಾಡಿದೆ.

ಮೋಗಾ ಮೆಡಿಸಿಟಿ ಆಸ್ಪತ್ರೆಯ ವೈದ್ಯರು ಮೂರು ಗಂಟೆ ಶಸ್ತ್ರಚಿಕಿತ್ಸೆ ಬಳಿಕ ವ್ಯಕ್ತಿಯ ಹೊಟ್ಟೆಯಲ್ಲಿ ನಟ್ಟು, ಬೋಲ್ಟು, ರಾಖಿಗಳು, ಸ್ಕ್ರ್ಯೂ, ಲಾಕೆಟ್‌ಗಳು, ಇಯರ್‌ಫೊನ್‌ ಸೇರಿ ಹತ್ತಾರು ವಸ್ತುಗಳು ಪತ್ತೆಯಾಗಿವೆ. ಜಿಪ್ಪರ್‌ ಟ್ಯಾಗ್‌, ಒಂದು ಮಾರ್ಬಲ್‌, ಒಂದು ಸೇಫ್ಟಿ ಪಿನ್‌, ವೈರ್‌ಗಳು ಕೂಡ ಇವರ ಹೊಟ್ಟೆಯಲ್ಲಿ ಪತ್ತೆಯಾಗಿವೆ. ಎಲ್ಲ ವಸ್ತುಗಳು ಈತನ ಹೊಟ್ಟೆಯಿಂದ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ..!

“ವ್ಯಕ್ತಿ ಹೊಟ್ಟೆನೋವಿನಿಂದ ಬಳಲಿ ನಮ್ಮ ಆಸ್ಪತ್ರೆಗೆ ಬಂದಿದ್ದ.ಈ ವೇಳೆ ಹೊಟ್ಟೆಯಿಂದ ಎಲ್ಲ ವಸ್ತುಗಳನ್ನು ತೆಗೆಯಲಾಗಿದೆ. ಆದರೂ, ಇವರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ಕಳೆದ ಎರಡು ವರ್ಷದಿಂದ ಇವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಸುಮಾರು ವರ್ಷಗಳಿಂದ ಇವರ ಹೊಟ್ಟೆಯಲ್ಲಿ ಇಷ್ಟೆಲ್ಲ ವಸ್ತುಗಳು ಇರುವ ಕಾರಣ ಗಂಭೀರ ಪರಿಣಾಮ ಬೀರುತ್ತಿದೆ” ಎಂದು ಹೇಳಿದ್ದಾರೆ.

ಇವರ ಹೊಟ್ಟೆಯಲ್ಲಿ ವಸ್ತುಗಳು ಪತ್ತೆಯಾಗಿರುವುದಕ್ಕೆ ಕುಟುಂಬಸ್ಥರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ವಸ್ತುಗಳನ್ನು ಏಕೆ ನುಂಗಿದ ಎಂಬುದರ ಕುರಿತು ಅವರಿಗೂ ಯಾವುದೇ ಮಾಹಿತಿ ಇಲ್ಲದಿರುವುದು ಮತ್ತೊಂದು ಅಚ್ಚರಿಯಾಗಿದೆ.

Related posts

ಮಸೀದಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 21 ಮಂದಿ ಸಾವು..! ಪ್ಯಾಲೆಸ್ತೀನಿಯರ ಸಾವಿನ ಸಂಖ್ಯೆ 42 ಸಾವಿರಕ್ಕೆ ಏರಿಕೆ..!

ವಿದೇಶಿ ಯೂಟ್ಯೂಬರ್‌ಗೆ ಕಿರುಕುಳ ನೀಡಿದ ನವಾಬ್‌..! ಕೃತ್ಯವೆಸಗಿದ ವರ್ತಕನ ಬಂಧಿಸಿದ ಪೊಲೀಸರು! ಇಲ್ಲಿದೆ ವೈರಲ್ ವಿಡಿಯೋ

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ, ಅನ್ಯಮತೀಯ ಜೋಡಿಗಳ ಮೇಲೆ ಹಿಂದೂ ಕಾರ್ಯಕರ್ತರ ದಾಳಿ