ದೇಶ-ಪ್ರಪಂಚ

ಪರೀಕ್ಷೆಯಲ್ಲಿ ತಂಗಿಗೆ ನಕಲು ಮಾಡಲು ಬಿಡದ್ದಕ್ಕೆ ಪೇದೆ ಮೇಲೆಯೇ ಕೈ ಮಾಡಿದ ಅಣ್ಣ!! ಏನಿದು ಘಟನೆ?

ನ್ಯೂಸ್‌ ನಾಟೌಟ್‌ : ರಾಜ್ಯಾದ್ಯಂತ ಪಿಯುಸಿ ಪರೀಕ್ಷೆ (PUC Exam) ನಡೆಯುತ್ತಿದ್ದು, ಈ ವೇಳೆ ಕಲಬುರಗಿಯಲ್ಲಿ ಅಚಾತುರ್ಯವೊಂದು ನಡೆದಿದೆ.ಹೌದು, ವ್ಯಕ್ತಿಯೊಬ್ಬ ತನ್ನ ತಂಗಿಗೆ ಪಿಯು ಪರೀಕ್ಷೆಯಲ್ಲಿ ನಕಲು ಮಾಡಲು ಸಹಕಾರ ಮಾಡಿಲ್ಲ ಅಂತಾ ಪೇದೆ ಮೇಲೆಯೇ ಕೈ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ್ ತಾಲೂಕಿನ ಕರಜಗಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಕೈಲಾಸ್ ಎಂಬಾತ ಪೊಲೀಸ್ ಪೇದೆ ಪಂಡಿತ್ ಪಾಂಡ್ರೆ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ನನ್ನ ತಂಗಿಗೆ ನಕಲು ಮಾಡಲು ಬಿಡಲ್ವಾ ಎಂದು ರೊಚ್ಚಿಗೆದ್ದ ಕೈಲಾಸ್, ಪಂಡಿತ್ ಪಾಂಡ್ರೆ ಮೇಲೆ ಕೈ ಮಾಡಿದ್ದಾನೆ.ಪ್ರಕರಣ ಸಂಬಂಧ ಆರೋಪಿ ಕೈಲಾಸ್ ಹಾಗೂ ಆತನ ಸ್ನೇಹಿತ ಸಮೀರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಅಫಜಲಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಎರಡೂವರೆ ವರ್ಷದ ಪುಟ್ಟ ಕಂದಮ್ಮ..!

ಕೇಜ್ರಿವಾಲ್​ ಜೈಲಿನಿಂದಲೇ ಸರ್ಕಾರ ನಡೆಸಲಿದ್ದಾರೆ ಎಂದ ಮುಖಂಡರು..! ದೆಹಲಿ ಸಿಎಂ ಬದಲಾಗ್ತಾರಾ..?

10 ಗ್ಯಾರಂಟಿಗಳನ್ನು ಘೋಷಿಸಿದ ಅರವಿಂದ ಕೇಜ್ರಿವಾಲ್..! ದಿಲ್ಲಿ ಸಿಎಂ ಬಹಳ ದಿನ ಜೈಲಲ್ಲಿ ಇದ್ದ ಕಾರಣ ಹುಚ್ಚರಂತೆ ವರ್ತಿಸುತ್ತಿದ್ದಾರೆ ಎಂದ ಆರ್ ಅಶೋಕ್