ಕರಾವಳಿ

ಬರೋಬ್ಬರಿ ೨೨ ಕೆ.ಜಿ ತೂಕದ ಮೀನು ಬಾರಿ ಬೆಲೆಗೆ ಸೇಲ್ , ಇದರ ಬೆಲೆ ಎಷ್ಟು ಗೊತ್ತಾ?

ನ್ಯೂಸ್ ನಾಟೌಟ್ : ಒಂದು ಮೀನಿನ ಬೆಲೆ ಅಬ್ಬಾಬ್ಬ ಅಂದ್ರೆ ಎಷ್ಟಿರಬಹುದು? ೧೦೦ ಇರಬಹುದು ಅಥವಾ ೫೦೦ ಇರಬಹುದು ಅದು ಇಲ್ಲ ಅಂದ್ರೆ ೧೦೦೦ ರೂ. ಅಂತಲೇ ಇಟ್ಟುಕೊಳ್ಳೋಣ..ನೀವು ಕಲ್ಪನೆ ಮಾಡಿದ ಅಂದಾಜಿನ ಬೆಲೆಗೂ , ಇಲ್ಲಿರುವ ಮೀನಿನ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ.ಒಂದು ಮೀನಿನ ಬೆಲೆ ಬರೋಬ್ಬರಿ 2,34,080 ರೂಪಾಯಿ! ಅಂದರೆ ನೀವು ನಂಬಲೇ ಬೇಕು.

ಯಾಕಿಷ್ಟು ಬೆಲೆ?

ಮಲ್ಪೆ ಬಂದರಿನ ಮೀನುಗಾರರಿಗೆ ಬರೋಬ್ಬರಿ 22 ಕೆ.ಜಿ. ತೂಕದ ಮೀನು ಬಲೆಗೆ ಸಿಕ್ಕಿದೆ. ಅದ್ಯಾವ ಘಳಿಗೆಯಲ್ಲಿ ಎದ್ದಿದ್ದಾರೋ ಏನೋ, ಈ ಮೀನು ಮೀನುಗಾರರ ಪಾಲಿಗೆ ಲಾಭದಾಯಕವಾಗಿದೆ.ಅರೇ, ಇದೇನಿದು? ಕೇವಲ 22 ಕೆ.ಜಿ. ತೂಕದ ಮೀನಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ರಾ? ಎಂದು ಆಶ್ಚರ್ಯಕ್ಕೊಳಗಾಗಬೇಡಿ. ಇದು ಮಾಮೂಲಿ ಮೀನು ಅಲ್ಲ. ಬದಲಾಗಿ ಇದು ಗೋಳಿ ಮೀನು. ಔಷಧಕ್ಕೆ ಬಳಕೆಯಾಗುವ ಗೋಳಿ ಮೀನಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚು.ಅಳಸಮುದ್ರ ಮೀನುಗಾರಿಕಾ ಬೋಟ್‌ನ ಬಲೆಗೆ ಬಿದ್ದ ಗೋಳಿ ಮೀನನ್ನು ಮಲ್ಪೆ ಬಂದರಿನಲ್ಲಿ ಹರಾಜು ಹಾಕಲಾಯಿತು. ಇದು 2,34,080 ರೂ.ಗೆ ಮಾರಾಟವಾಗಿದೆ ಅಂದರೆ ನೀವು ನಂಬಲೇಬೇಕು.

Related posts

ಪುತ್ತೂರು: ಆನ್ ಲೈನ್ ನಲ್ಲಿ ಡ್ರಮ್ ಖರೀದಿಸಿದ ಉದ್ಯಮಿಗೆ ಉಂಡೆನಾಮ..! ಮೂರು ಹಂತದಲ್ಲಿ ಹಣ ಪೀಕಿದ ವಂಚಕರು

ಮುಸ್ಲಿಂ ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನಕಾರಿ ಪೋಸ್ಟ್ ,ಸಿಐಡಿ ತನಿಖೆ

ಶಾಸಕ ಹರೀಶ್ ಪೂಂಜಾರಿಗೆ ತಲ್ವಾರ್ ತೋರಿಸಿದವ ಅರೆಸ್ಟ್